ಪ್ರಪಂಚಕ್ಕೆ ಜ್ಞಾನದ ಪಾಠ ಮಾಡಿದ ವಿಶ್ವ ವಿದ್ಯಾಲಯಗಳ ಸುಂದರ ಚರಿತ್ರೆ ಭಾರತಕ್ಕಿದೆ- ರತ್ನಾಕರ ಮಲ್ಲಮೂಲೆ

ಬದಿಯಡ್ಕ: ಆರ್ಷೇಯ ಧರ್ಮದ ತಾತ್ವಿಕ ನಿಲುವುಗಳು ಮನುಷ್ಯತ್ವ ಮತ್ತು ಪ್ರಕೃತಿಗೆ ಹೆಚ್ಚು ಒತ್ತು ಕೊಟ್ಟಿದ್ದುವು. ದೇವರ ಪರಿಕಲ್ಪನೆ ಹಾಗೂ ಅದಕ್ಕೆ ಪೂರಕವಾದ ಆರಾಧನೆ ಭಯ ಭಕ್ತಿಗಳು ಮನುಷ್ಯನ ಕೌಟುಂಬಿಕ ಹಾಗೂ ಸಾಮಾಜಿಕ ಬದುಕಿನ ಸುಸ್ಥಿತಿಗೂ ಸುಂದರವಾದ ಚೌಕಟ್ಟಿಗೂ ಕಾರಣವಾಗುತ್ತಿತ್ತು. ಪ್ರಪಂಚಕ್ಕೆ ಜ್ಞಾನದ ಪಾಠ ಮಾಡಿದ ವಿಶ್ವವಿದ್ಯಾಲಯಗಳ ಸುಂದರ ಚರಿತ್ರೆ ಭಾರತಕ್ಕಿದೆ. ವೇದ ಕಾಲದಲ್ಲಿ ಇದ್ದ ಕೌಶಲ್ಯಾಧಾರಿತ ಬದುಕಿನ ನಡೆ ಮತ್ತು ಹಲವು ಧನಾತ್ಮಕ ವಿಷಯಗಳು ಇಂದಿಗೂ ಪ್ರಸ್ತುತ ಎಂದು ಕಾಸರಗೋಡು ಸರಕಾರೀ ಕಾಲೇಜಿನ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ ಅಭಿಪ್ರಾಯಪಟ್ಟರು.
ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದ 49ನೇ ವಾರ್ಷಿಕೋ ತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಕಳೆದು ಹೋದುದೆಲ್ಲ ಮೌಢ್ಯಗಳಲ್ಲ. ಭಯ, ಭಕ್ತಿ ಆರಾಧನೆ ಗಳು ವ್ಯಕ್ತಿಯ ಹಾಗೂ ವ್ಯಷ್ಟಿಯ ಒಳಿತಿಗೆ ಕಾರಣವಾಗುವುದಿದೆ. ಅಲ್ಲಿ ಜೀವನಾನುಭವಗಳಿವೆ. ಆದ ಕಾರಣ ಧನಾತ್ಮಕವಾದ ನಂಬಿಕೆ, ಆಚರಣೆ, ಭಯ, ಭಕ್ತಿಗಳು ಮುಂದುವರಿಯಬೇಕು ಎಂದರು. ಶ್ರೀ ಕುಮಾರಸ್ವಾಮಿ ಭಜನಾ ಸಂಘದ ಅಧ್ಯಕ್ಷ ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ, ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ಉದಯಕುಮಾರ್ ನೀರ್ಚಾಲು, ಶ್ರೀ ಕುಮಾರಸ್ವಾಮಿ ಭಜನಾ ಸಂಘದ ಗುರುಸ್ವಾಮಿ ಸುಬ್ರಹ್ಮಣ್ಯ ಆಚಾರ್ಯ, ಶಿವಾಜಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ವಿಜೇಶ್ ಕುಮಾರ್, ಶ್ರೀ ಕುಮಾರಸ್ವಾಮಿ ಮಹಿಳಾ ಭಜನಾ ಸಂಘದ ಅಧ್ಯಕ್ಷೆ ಪದ್ಮಾವತಿ ಗಂಗಾಧರ ಪೂವಾಳೆ ಮಲ್ಲಡ್ಕ ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯ ದೇವದಾಸ ಆಚಾರ್ಯ ನೀರ್ಚಾಲು ಇವರಿಗೆ ಗೌರವಾರ್ಪಣೆ ನಡೆಯಿತು. ಕೃಷ್ಣನಾಯ್ಕ ಮಲ್ಲಡ್ಕ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಬಹುಮಾನ ವಿತರಿಸಿದರು. ಜೊತೆ ಕಾರ್ಯದರ್ಶಿ ಗಣೇಶ್ ಕೆ.ನೀರ್ಚಾಲು ಪ್ರಾರ್ಥನೆ ಹಾಡಿದರು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ಸ್ವಾಗತಿಸಿದರು. ಕೋಶಾದಿsಕಾರಿ ಸುರೇಶ್ ನಾಯ್ಕ ಒ.ಎನ್. ಲೆಕ್ಕಪತ್ರಮಂಡಿಸಿದರು.
ಗಣಪತಿ ಹೋಮ, ಧ್ವಜಾರೋಹಣ, ವೇದಮೂರ್ತಿ ಕಿಳಿಂಗಾರು ಶಿವಶಂಕರ ಭಟï‌ರಿಂದ ಆಶ್ಲೇಷ ಪೂಜೆ, ಶ್ರೀ ಕುಮಾರಸ್ವಾಮಿ ಮಹಿಳಾ ಭಜನಾ ಸಂಘದವರಿAದ ಭಜನೆ, ಶ್ರೀ ಧರ್ಮಶಾಸ್ತಾ ಮಹಿಳಾ ಭಜನಾ ಸಂಘದವರಿAದ ಭಜನೆ, ಮಹಾಪೂಜೆ, ಶ್ರೀ ಕುಮಾರಸ್ವಾಮಿ ಮಹಿಳಾ ಸಂಘದವರಿAದ ತಿರುವಾದಿರ ನಡೆಯಿತು. ಶಿವಾಜಿ ಫ್ರೆಂಡ್ಸ್ ನೀರ್ಚಾಲು ಪ್ರಾಯೋಜಕತ್ವದಲ್ಲಿ ಹನುಮಗಿರಿ ಶ್ರೀ ಕೋದಂಡರಾಮ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀಕೃಷ್ಣ ಪಾರಿಜಾತ, ನರಕಾಸುರ ವಧೆ, ಮೈಂದ ದ್ವಿವಿದ ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

You cannot copy content of this page