ಪ್ರಾಥಮಿಕ ಶಿಕ್ಷಾವರ್ಗ ಸಮಾರೋಪ ಇಂದು
ಕೂಡ್ಲು: ಕಳೆದ ಒಂದು ವಾರದಿಂದ ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ನಲ್ಲಿ ಜರಗಿದ ಆರ್.ಎಸ್.ಎಸ್. ಜಿಲ್ಲಾ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭ ಇಂದು ಸಂಜೆ ೫ ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚರ್ಚ್ ಆಫ್ ಇಂಡಿಯಾ ಇದರ ಏರಿಯಾ ಅಧ್ಯಕ್ಷ ರೆ| ವಿಲಿಯಮ್ ಬಿ. ಕುಂದರ್ ಭಾಗವಹಿಸುವರು. ಆರ್ಎಸ್ಎಸ್ ಉತ್ತರ ಕೇರಳ ಪ್ರಾಂತ ಸಹಕಾರ್ಯವಾಹ ಪಿ.ಪಿ. ಸುರೇಶ್ ಬಾಬು ಬೌದ್ದಿಕ್ ನೀಡುವರು.