ಪ್ರಾಥಮಿಕ ಸಹಕಾರಿ ಸಂಘಗಳೊಂದಿಗೆ ಕೇರಳ ಬ್ಯಾಂಕ್‌ನ ಅವಗಣನೆ ಕೊನೆಗೊಳಿಸಬೇಕು: ತಾಲೂಕು ಮಟ್ಟದಲ್ಲಿ ಸಹಕಾರಿ ಧರಣಿ
ಮಂಜೇಶ್ವರ: ಸಹಕಾರಿ ಪ್ರಜಾ ಪ್ರಭುತ್ವ ವೇದಿ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಸಹಕಾರಿ ಧರಣಿ ನಡೆಯಿತು. ಪ್ರಾಥಮಿಕ ಸಹಕಾರಿ ಸಂಘಗಳೊಂದಿಗೆ ಕೇರಳ ಬ್ಯಾಂಕ್ ತೋರಿಸುವ ಅವಗಣನೆ ಕೊನೆಗೊಳಿಸಬೇಕು, ಸಹಕಾರಿ ವಲ ಯದ ಪ್ರಜಾಪ್ರಭುತ್ವವನ್ನು ಇಲ್ಲದಾ ಗಿಸುವ ಸರಕಾರದ ನೀತಿಯನ್ನು ತಿದ್ದ ಬೇಕು, ಜಪ್ತಿ ಕ್ರಮಗಳ ವಿರುದ್ಧ ನೀಡಿದ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂತೆಗೆಯಬೇಕು, ಸಂಘಗಳ ಫಂಡ್‌ಗಳನ್ನು ಕಸಿಯಲಿರುವ ಸರಕಾರದ ಯತ್ನವನ್ನು ಕೊನೆಗೊಳಿಸಬೇಕು, ಸಹಕಾರಿ ಸಂಸ್ಥೆಗಳೊಂದಿಗೆ ಸರಕಾರ ಹಾಗೂ ಕೇರಳ ಬ್ಯಾಂಕ್ ತೋರಿಸುವ ಭೇದ ಭಾವ ಕೊನೆಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಧರಣಿ ನಡೆಸಲಾಯಿತು.
ಕೇರಳ ಬ್ಯಾಂಕ್ ಉಪ್ಪಳ ಶಾಖೆ ಮುಂದೆ ನಡೆದ ಧರಣಿಯನ್ನು ರಾಜ್ಯ ಕೃಷಿ ಅಭಿವೃದ್ಧಿ ಬ್ಯಾಂಕ್ ಡೈರೆಕ್ಟರ್ ಹಾಗೂ ಡಿಸಿಸಿ ಪ್ರಧಾನ ಕಾರ್ಯದರ್ಶಿ ಯಾದ ಜೆ.ಎಸ್. ಸೋಮಶೇಖರ್ ಉದ್ಘಾಟಿಸಿದರು. ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದರು. ರವಿ, ಕಾದರ್ ಮಾನ್ಯ, ಬಿ.ಎಸ್. ಗಾಂಭೀರ್, ಹನೀಫ್ ಪಡಿಂಞಾರ್, ಲಕ್ಷ್ಮಣ ಪ್ರಭು, ಪ್ರದೀಪ್ ಕುಮಾರ್ ಶೆಟ್ಟಿ, ಫಾರೂಕ್, ಸುಲೈಮಾನ್ ಊಜಂಪದವು ಮೊದಲಾದವರು ಮಾತನಾಡಿದರು.