ಪ್ರಾಯಪೂರ್ತಿಯಾಗದ ಬಾಲಕಿಗೆ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಪ್ರಕರಣ: ಮಂಗಳೂರಿನ ವೈದ್ಯನೋರ್ವನ ವಿರುದ್ಧ ಪೋಕ್ಸೋ ಕೇಸು ದಾಖಲು
ಮಂಜೇಶ್ವರ: ಪ್ರಾಯ ಪೂರ್ತಿ ಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆಕೆಯನ್ನು ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ವೈದ್ಯನೋ ರ್ವನ ವಿರುದ್ಧ ಮಂಜೇಶ್ವರ ಪೊಲೀ ಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.
ಮಂಗಳೂರಿನ ಆಸ್ಪತ್ರೆಯೊಂದರ ವೈದ್ಯನಾದ ಶಾಶ್ವತ್ ಕುಮಾರ್ ಎಂಬಾತನ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ: ಇದು 2023ರಲ್ಲಿ ದಾಖಲಿಸಿ ಕೊಂಡ ಪೋಕ್ಸೋ ಪ್ರಕರಣವಾಗಿದೆ. ಪ್ರಾಯ ಪೂರ್ತಿಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು. ಇದರಂತೆ ಅಂದು ಓರ್ವ ವ್ಯಕ್ತಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿತ್ತು. ಈ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಬಳಿಕ ನ್ಯಾಯಾಲಯದ ಅನುಮತಿ ಮೇರೆಗೆ ಗರ್ಭಛಿದ್ರ ನಡೆಸಲಾಗಿತ್ತು. ಅಲ್ಲದೆ ಮಗುವಿನ ತಂದೆ ಯಾರೆಂದು ತಿಳಿಯಲು ಡಿಎನ್‌ಎ ತಪಾಸಣೆ ನಡೆಸಲಾಗಿತ್ತು. ಆ ತಪಾಸಣೆಯ ವರದಿ ಇದೀಗ ಲಭಿಸಿದೆ. ಆದರೆ ಅದು ಪೊಲೀಸರು ಅಂದು ಕೇಸು ದಾಖಲಿಸಿಕೊಂಡ ವ್ಯಕ್ತಿ ಮಗುವಿನ ತಂದೆಯಲ್ಲವೆಂದು ತಿಳಿದುಬಂದಿದೆ.
ಅಂದು ಕಿರುಕುಳಕ್ಕೆಡೆಯಾದ ಬಾಲಕಿಗೆ ಇದೀಗ ಪ್ರಾಯಪೂರ್ತಿಯಾಗಿದ್ದು, ಮದುವೆಯೂ ನಡೆದಿದೆ. ಇದರಿಂದ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ವ್ಯಕ್ತಿ ಯಾರೆಂದು ಖಚಿತಪಡಿಸುವ ಉದ್ದೇಶದಿಂದ ಯುವತಿಯಿಂದ ಇದೀಗ ಪುನಃ ಹೇಳಿಕೆ ದಾಖಲಿಸಿ ಕೊಂಡಾಗ ಮಂಗಳೂರಿನ ಆಸ್ಪತ್ರೆಯ ವೈದ್ಯನಾದ ಶಾಶ್ವತ್ ಕುಮಾರ್ ಕಿರುಕುಳ ನೀಡಿದ ವಿಷಯ ಬೆಳಕಿಗೆ ಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.