ಪ್ರಿಯತಮೆಯ ಮದುವೆಯಾಗಲು ಸ್ನೇಹಿತನಿಗೆ ಸಹಾಯವೊದಗಿಸಿದ ದ್ವೇಷ: ಉಪ್ಪಳದ ಆಟೋ ಚಾಲಕನನ್ನು ಇರಿದು ಕೊಲೆಗೈದ ಪ್ರಕರಣ; ಒಂದನೇ ಆರೋಪಿಗೆ ಜೀವಾವಧಿ ಸಜೆ
ಕಾಸರಗೋಡು: ಮನೆಯವರ ವಿರೋಧವನ್ನು ಅವಗಣಿಸಿ ಪ್ರಿಯತಮೆಯನ್ನು ಮದುವೆ ಯಾಗಲು ಸ್ನೇಹಿತನಿಗೆ ಸಹಾಯವೊ ದಗಿಸಿದನೆಂದು ಆರೋಪಿಸಿ ಆಟೋ ಚಾಲಕನನ್ನು ಇರಿದು ಕೊಲೆಗೈದ ಪ್ರಕರಣದ ಒಂದನೇ ಆರೋಪಿಗೆ ನ್ಯಾಯಾಲಯ ಜೀವಾವಧಿ ಸಜೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಜೀವಾವಧಿ ಸಜೆಯ ಹೊರತು ಹತ್ಯೆಯತ್ನ ಪ್ರಕರಣದಲ್ಲಿ ಏಳು ವರ್ಷ ಸಜೆ ಹಾಗೂ ೫೦ ಸಾವಿರ ರೂಪಾಯಿ ದಂಡ ಪಾವತಿಸುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಉಪ್ಪಳ ಪೊಸೋಟ್ನ ಅಬೂಬಕರ್ ಸಿದ್ದಿಕ್ (35) ಎಂಬಾತನಿಗೆ ಕಾಸರಗೋಡು ಅಡಿಶನಲ್ ಸೆಶನ್ಸ್ ನ್ಯಾಯಾಲಯ (ಮೂರು)ದ ನ್ಯಾಯಾಧೀಶರು ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದ ಎgಡನೇ ಆರೋಪಿ ಹಾರೂನ್ ರಶೀದ್ ತಲೆಮರೆಸಿಕೊಂಡಿದ್ದಾನೆ. ಮೂರನೇ ಆರೋಪಿಯಾದ ಮುಹಮ್ಮದ್ ಕುಂಞಿ ಈ ಹಿಂದೆ ಮೃತಪಟ್ಟಿದ್ದಾನೆ.
೨೦೦೮ ಅಗೋಸ್ತ್ ೨೪ರಂದು ರಾತ್ರಿ ಉಪ್ಪಳ ಪೊಸೋಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಡೀ ಊರನ್ನೇ ಬೆಚ್ಚಿ ಬೀಳಿಸಿದ ಕೊಲೆಕೃತ್ಯ ನಡೆದಿತ್ತು.
ಜಮ್ಮಿ ಯಾನೆ ಸಮೀರ್ ಎಂಬವರ ಸ್ನೇಹಿತನಾಗಿದ್ದ ಉಪ್ಪಳ ಕೀಯೂರಿನ ಮುನೀರ್ ನೆರೆಮನೆ ನಿವಾಸಿಯಾದ ಓರ್ವೆ ಯುವತಿಯೊಂದಿಗೆ ಪ್ರೇಮದಲ್ಲಿದ್ದನು. ಪ್ರಸ್ತುತ ಯುವತಿಯನ್ನು ಮದುವೆಯಾಗಲು ಮುನೀರ್ ಅಲೋಚಿಸಿದ್ದನು. ಆದರೆ ಮನಯವರು ಅದನ್ನು ವಿರೋಧಿಸಿದ್ದರು. ಅದನ್ನು ಅವಗಣಿಸಿ ಕುಂಜತ್ತೂರಿನಲ್ಲಿರುವ ಸಹೋದರಿಯ ಮನೆಯಲ್ಲಿ ಮದುವೆ ನಡೆಸಲಾಗಿತ್ತು. ಮುನೀರ್ಗೆ ಇದಕ್ಕೆಲ್ಲಾ ಸಹಾಯವೊದಗಿಸಿರುವುದು ಉಪ್ಪಳ ಹಿದಾಯತ್ ನಗರದ ಜಮ್ಮಿ ಯಾನೆ ಸಮೀರ್ (26) ಆಗಿದ್ದನೆನ್ನಲಾಗಿದೆ. ಅದರ ಹೆಸರಲ್ಲಿ ಯುವತಿಯ ಮನೆಯವರಿಗೆ ಸಮೀರ್ನೊಂದಿಗೆ ದ್ವೇಷ ಹುಟ್ಟಿಕೊಂಡಿದ್ದು. ಅದುವೇ ಕೊಲೆಕೃತ್ಯಕ್ಕೆ ಕಾರಣವಾಗಿತ್ತೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿತ್ತು.
ಘಟನೆ ದಿನ ಮುನೀರ್ ಹಾಗೂ ಸ್ನೇಹಿತರು ಜಮ್ಮಿ ಯಾನೆ ಸಮೀರ್ನ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿ ದ್ದಾರೆಂದು ತಿಳಿದು ಪೊಸೋಟ್ನಲ್ಲಿ ಕಾದು ನಿಂತಿದ್ದ ಮೂರು ಮಂದಿ ತಂಡ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಆಕ್ರಮಿಸಿರುವುದಾಗಿ ಕೇಸು ದಾಖಲಿಸಲಾಗಿತ್ತು. ಆಕ್ರಮಣದಲ್ಲಿ ಸಮೀರ್ನ ಆಟೋ ರಿಕ್ಷಾದಲ್ಲಿ ಬೇಕೂರು ನಿವಾಸಿಯಾದ ಸಮೀರ್, ನವವರನೂ, ಸ್ನೇಹಿತನಾದ ಮುನೀರ್ಗೂ ಇರಿತವುಂಟಾಗಿತ್ತು. ಕೊಲೆಕೃತ್ಯದ ಬಳಿಕ ಮಂಗಳೂರು ವಿಮಾನ ನಿಲ್ದಾಣ ಮೂಲಕ ಒಂದನೇ ಆರೋಪಿಯಾದ ಅಬೂಬಕರ್ ಸಿದ್ದಿಕ್ ಗಲ್ಫ್ಗೆ ಪರಾರಿಯಾಗಿದ್ದನು. ಅನಂತರ ೨೦೧೨ರಲ್ಲಿಕುಂಬಳೆ ಸಿ.ಐ ಆಗಿದ್ದ ಟಿ.ಪಿ. ರಂಜಿತ್ ಈತನನ್ನು ಬಂಧಿಸಿದ್ದರು. ಅನಂತರ ಕುಂಬಳೆ ಸಿಐ ಆಗಿದ್ದ ಕೆ. ದಾಮೋದರನ್ ತನಿಖೆ ನಡೆಸಿದ ಪ್ರಕರಣವನ್ನು ಈಗಿನ ಕಾಸರಗೋಡು ಸ್ಟೇಟ್ ಸ್ಪೆಶಲ್ ಬ್ರಾಂಚ್ ಡಿವೈಎಸ್ಪಿ ಸಿಬಿ ಥೋಮಸ್ ತನಿಖೆ ಪೂರ್ತಿಗೊಳಿಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು.