ಪ್ಲಸ್‌ವನ್ ಪ್ರವೇಶಕ್ಕೆ ಮುಂದಾಗುವ ವಿದ್ಯಾರ್ಥಿಗಳು ತಿಳಿದಿರಬೇಕಾದ ವಿಷಯಗಳು
ಕಾಸರಗೋಡು: ಹತ್ತನೇ ತರಗತಿ ಪರೀಕ್ಷಾ ಫಲತಾಂಶ ಪ್ರಕಟಗೊಂಡ ಬಳಿಕ ಪ್ಲಸ್‌ವನ್ ತರಗತಿಗೆ ಕಾಯುತ್ತಿರುವ ವಿದ್ಯಾರ್ಥಿಗಳು ತಿಳಿಯಬೇಕಾದ ಕೆಲವು ಪ್ರಧಾನ ವಿಷಯಗಳನ್ನು ಇಲ್ಲಿ ನೀಡಲಾಗಿದೆ.
ಹೈಯರ್ ಸೆಕೆಂಡರಿಯಲ್ಲಿ ನಾವುಆಯ್ಕೆ ಮಾಡುವ ಕೋರ್ಸ್‌ಗಳು ನಮ್ಮ ಭವಿಷ್ಯವನ್ನು ನಿರ್ಣಯಿಸುವುದಾಗಿದ್ದು, ಆದುದರಿಂದ ಬಹಳ ಜಾಗ್ರತೆಯಿಂದ ಕೋರ್ಸ್‌ಗಳನ್ನು ಆಯ್ಕೆ ಮಾಡಬೇಕು. ಮುಂದೆ ಏನಾಗಬೇಕು ಎಂದು ತೀರ್ಮಾನಿಸಿ ಅದಕ್ಕೆ ತಲುಪಲಿರುವ ಮೊದಲ ಮೆಟ್ಟಿಲಾಗಿ ಪ್ಲಸ್‌ವನ್‌ನ್ನು ಆಯ್ಕೆ ಮಾಡಬೇಕು. ಉದಾಹರಣೆಗೆ ಡಾಕ್ಟರ್ ಆಗಬೇಕೆಂದು ಆಗ್ರಹಿಸುವವರು ಬಯೋಲಜಿ, ಸಯನ್ಸ್ ವಿಷಯಗಳನ್ನು ಆಯ್ಕೆ ಮಾಡಿದರೆ ಮಾತ್ರವೇ ತಮ್ಮ ಗುರಿಯತ್ತ ಸಾಗಬಹುದಾಗಿದೆ. ಇದೇ ರೀತಿ ಕಾಂಬಿನೇಶನ್‌ಗಳು, ಅವಕಾಶಗಳು, ಸಾಧ್ಯತೆಗಳು ಹಲವು ಇದೆ. ಪ್ಲಸ್‌ವನ್‌ಗೆ ಅರ್ಜಿ ಸಲ್ಲಿಸುವಾಗ ಸೂಕ್ಷ್ಮವಾಗಿ ಗಮನಿಸಿ ಭರ್ತಿಗೊಳಿಸಬೇಕಾಗಿದೆ. https://hscap.kerala.gov.in. ಎಂಬ ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಸ್ವಂತವಾಗಿ ಅಥವಾ ಶಾಲೆಗಳ ಹೆಲ್ಪ್ ಡೆಸ್ಕ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು. ನೋಂದಾವಣೆ ಸಮಯದಲ್ಲಿ ಮೊಬೈಲ್ ಫೋನ್ ಅತ್ಯಗತ್ಯವಾಗಿದೆ. ನೋಂದಾವಣೆ ಮಾಡುವಾಗ ಲಭಿಸುವ ಅರ್ಜಿ ನಂಬ್ರ, ನೀವು ನೀಡುವ ಪಾಸ್‌ವರ್ಡ್‌ಗಳನ್ನು ಮರೆಯದೆ ತೆಗೆದಿಟ್ಟುಕೊಳ್ಳಿ. ಅರ್ಜಿ ಸಲ್ಲಿಸಲು ಮೇ 14ರಿಂದ 20ರ ವರೆಗೆ ಅವಕಾಶ ನೀಡಲಾಗಿದೆ. ಕೆಲವೊಮ್ಮೆ ದಿನಾಂಕ ಬದಲಾವಣೆ ಉಂಟಾಗಬಹು ದಾದರೂ ವಿಳಂಬವಿಲ್ಲದೆ ತಪ್ಪಿಲ್ಲದೆ ಅರ್ಜಿ ಸಲ್ಲಿಸಲು ಪ್ರಯತ್ನಿಸಬೇಕು. ಮೇ 24ರಂದು ಟ್ರಯಲ್ ಅಲೋಟ್‌ಮೆಂಟ್ ಆಗಿದೆ. ಮೊದಲ ಅಲೋಟ್‌ಮೆಂಟ್ ಜೂನ್ ೨ರಂದಾಗಿದೆ. ಪ್ರವೇಶ ಕ್ರಮಗಳು ಜುಲೈ 23ರಂದು ಕೊನೆಗೊಳ್ಳಲಿದೆ.