ಪ್ಲಸ್ ಟು ವಿದ್ಯಾರ್ಥಿನಿಗೆ ಮದ್ಯ ನೀಡಿ ಮಾನಭಂಗ: ನ್ಯಾಯವಾದಿ ವಿರುದ್ಧ ಪೋಕ್ಸೋ ಕೇಸು
ಪತ್ತನಂತಿಟ್ಟ: ಪ್ಲಸ್ ಟು ವಿದ್ಯಾರ್ಥಿ ನಿಯನ್ನು ನ್ಯಾಯವಾದಿ ಮಾನಭಂಗ ಪಡಿಸಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದಾಗ ನ್ಯಾಯವಾದಿ ತಲೆಮರೆಸಿಕೊಂಡಿದ್ದಾನೆ. ಹೈಕೋರ್ಟ್‌ನ ನ್ಯಾಯವಾದಿ ಹಾಗೂ ಕಾಯಂಕುಳಂ ನಿವಾಸಿಯಾದ ನೌಶಾದ್ (46) ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ದೌರ್ಜನ್ಯಕ್ಕೆ ಒತ್ತಾಸೆ ನೀಡಿದ ಬಾಲಕಿಯ ಸಂಬಂಧಿಕೆಯಾದ ಮಹಿಳೆಯನ್ನು ಆರನ್ಮುಳ ಎಸ್‌ಐ ಕೆ.ಆರ್. ಶೆಮಿ ಮೋಳ್‌ರ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ.
2023 ಜೂನ್ 10ರಂದು ಬಾಲಕಿ ಪ್ರಥಮವಾಗಿ ಮಾನಭಂಗಕ್ಕೆ ತುತ್ತಾಗಿದ್ದಾಳೆ. ಸಂಬಂಧಿಕೆಯಾದ ಮಹಿಳೆಯ ಸಹಾಯದೊಂದಿಗೆ ಬಾಲಕಿಯನ್ನು ಕೋಯಂಜೇರಿಯ ಒಂದು ಹೊಟೇಲ್ ಕೊಠಡಿಗೆ ತಲುಪಿಸಿ ಬಲ ಪ್ರಯೋಗಿಸಿ ಮದ್ಯ ನೀಡಿದ್ದು, ಆಕೆ ಪ್ರಜ್ಞಾಹೀನಗೊಂಡಾಗ ಮಾನಭಂಗ ಪಡಿಸಿರುವುದಾಗಿ ಕೇಸು ದಾಖಲಿಸಲಾಗಿದೆ. ದೌರ್ಜನ್ಯದ ದೃಶ್ಯಗಳು ದಾಖಲಾಗಿವೆ ಎಂದು ಬೆದರಿಸಿ ತಂದೆ ಹಾಗೂ ಮಗಳನ್ನು ಬೆದರಿಸುತ್ತಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಪತ್ತನಂತಿಟ್ಟ ಚೈಲ್ಡ್ ವೆಲ್‌ಫೇರ್ ಕಮಿಟಿಯಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಬಾಲಕಿಯ ಹೇಳಿಕೆ ದಾಖಲಿಸಿದ ಬಳಿಕ ಆರನ್ಮುಳ ಪೊಲೀಸರು ಕೇಸು ದಾಖಲಿಸಿದ್ದಾರೆ.
ಹೊಟೇಲ್‌ನ ದಾಖಲೆಗಳನ್ನು ಪರಿಶೀಲಿಸಿದಾಗ ಬಾಲಕಿಯನ್ನು ಆರೋಪಿಗಳು ಅಲ್ಲಿಗೆ ಕರೆದುಕೊಂಡು ಬಂದಿದ್ದರು ಎಂಬುದಕ್ಕೆ ಪುರಾವೆ ಲಭಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.