ಫುಟ್ಬಾಲ್ ಪಂದ್ಯಾಟ ಮೈದಾನದಲ್ಲಿ ಪಟಾಕಿ ಸಿಡಿಸಿದ 10 ಮಂದಿ ವಿರುದ್ಧ ಕೇಸು
ಕಾಸರಗೋಡು: ಫುಟ್ಬಾಲ್ ಪಂದ್ಯಾಟ ನಡೆಯುವ ಮೈದಾನದಲ್ಲಿ ಪಟಾಕಿ ಸಿಡಿಸಿದ ಘಟನೆಯಲ್ಲಿ ೧೦ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದರು. ನಿನ್ನೆ ಚಿತ್ತಾರಿ ಹಿಮಾಯತುಲ್ ಇಸ್ಲಾಂ ಎಯುಪಿ ಶಾಲಾ ಮೈದಾನದಲ್ಲಿ ಘಟನೆ ನಡೆದಿದೆ. ಫುಟ್ಬಾಲ್ ಪಂದ್ಯಾಟಕ್ಕಾಗಿ ಸಿದ್ಧಪಡಿಸಿದ ತಾತ್ಕಾಲಿಕ ಮೈದಾನದಲ್ಲಿ ಆಟಗಾರರು ಹಾಗೂ ಆಟ ವೀಕ್ಷಿಸಲು ಬರುವವರಿಗೆ ಅಪಾಯವಾಗುವ ರೀತಿಯಲ್ಲಿ ಪಟಾಕಿ ಸಿಡಿಸಿದುದಾಗಿ ಆರೋಪಿಸಿ ಕಂಡರೆ ಗುರುತು ಹಚ್ಚಬಹುದಾದ 10 ಮಂದಿ ವಿರುದ್ಧ ಹೊಸದುರ್ಗ ಎಸ್‌ಐ ನೇರವಾಗಿ ಕೇಸು ದಾಖಲಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.