ಫೇಸ್‌ಬುಕ್‌ನಲ್ಲಿ ಪರಿಚಯ: ಪ್ರಿಯತಮನೊಂದಿಗೆ ಲಾಡ್ಜ್‌ಗೆ ತಲುಪಿದ ಗೃಹಿಣಿ ಆತ್ಮಹತ್ಯೆಗೆ ಯತ್ನ
ಕಣ್ಣೂರು: ಪ್ರಿಯತಮನೊಂದಿಗೆ ಲಾಡ್ಜ್‌ನಲ್ಲಿ ಕೊಠಡಿ ಪಡೆದ ಗೃಹಿಣಿ ಬಳಿಕ ಅಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕೊಲ್ಲಂ ನಿವಾಸಿಯಾದ ೪೦ರ ಹರೆಯದ ಗೃಹಿಣಿ ಪರಶ್ಶಿನಿಕಡವಿನ ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಫೇಸ್‌ಬುಕ್ ಮೂಲಕ ಪರಿಚಯಗೊಂಡ ಪಾಪಿನಿಶ್ಶೇರಿ ನಿವಾಸಿಯಾದ ಯುವಕನೊಂದಿಗೆ ಗೃಹಿಣಿ ಲಾಡ್ಜ್‌ಗೆ ತಲುಪಿದ್ದಳು. ಬಳಿಕ ಅಲ್ಲಿ ಹಗ್ಗದಲ್ಲಿ ನೇಣು ಹಾಕಿದ್ದಾಳೆ. ಅದನ್ನು ಕಂಡ ಯುವಕ ಲಾಡ್ಜ್‌ನ ನೌಕರರ ಸಹಾಯದೊಂದಿಗೆ ಯುವತಿಯನ್ನು ಆಸ್ಪತ್ರೆಗೆ ತಲುಪಿಸಿ ಅಪಾಯದಿಂದ ಪಾರುಮಾಡಿದ್ದಾನೆ.
ಗಂಭೀರ ಸ್ಥಿತಿಯಲ್ಲಿರುವ ಗೃಹಿಣಿಯನ್ನು ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೆಂಟಿಲೇಟ ರ್‌ನಲ್ಲಿ ದಾಖಲಿಸಲಾಗಿದೆ.