ಬಂಗ್ರಮಂಜೇಶ್ವರ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಧನುಪೂಜೆ ಆರಂಭ
ಮಂಜೇಶ್ವರ: ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಧನುರ್ಮಾಸ ಪೂಜೆ ಆರಂಭಗೊ೦ಡಿತು. ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ್ ಕೆ. ಉಮೇಶ್ ತಂತ್ರಿ ಮಂಗಳೂರು, ಪ್ರಧಾನ ಅರ್ಚಕ ಬ್ರಹ್ಮಶ್ರೀ ಪ್ರಕಾಶ್ಚಂದ್ರ ಶ್ರೌತಿಯವರ ಪೌರೋಹಿತ್ಯದಲ್ಲಿ ಆರಂಭಗೊAಡ ಪೂಜೆ ಒಂದು ತಿಂಗಳು ಮುಂದುವರಿಯಲಿದೆ. ಇದರಂಗವಾಗಿ ಬೆಳಿಗ್ಗೆ ಗುರು ಗಣಪತಿ ಪೂಜೆ, ಮಹಾ ಗಣಪತಿ ಹೋಮ ಸಹಿತ ಹಲವು ವೈದಿಕ ಕಾರ್ಯಕ್ರಮ ಜರಗಿತು. ಭಜನಾ ಸಂಕೀರ್ತನೆ ನಡೆಯಿತು.
ಶಬರಿಮಲೆ: 22.67 ಲಕ್ಷ ತೀರ್ಥಾಟಕರಿಂದ ದರ್ಶನ
ಶಬರಿಮಲೆ: ಮಂಡಲಕಾಲದ ತೀರ್ಥಾಟನೆ ಆರಂಭಗೊAಡು 29 ದಿನಗಳಲ್ಲಿ 22.67 ಲಕ್ಷಕ್ಕೂ ಹೆಚ್ಚು ತೀರ್ಥಾಟಕರು ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ್ದಾರೆ. ಕಳೆದ ವರ್ಷ ಇದು 18.16 ಲಕ್ಷವಾಗಿತ್ತು. ಈ ವರ್ಷ ದೇವಸ್ವಂ ಮಂಡಳಿಗೆ ಇದುವರೆಗೆ 163.89 ಕೋಟಿ ರೂಪಾಯಿ ಆದಾಯ ಲಭಿಸಿದೆ. ಕಳೆದ ವರ್ಷ 141.12 ಕೋಟಿ ರೂ. ಆಗಿತ್ತು. ಈ ಬಾರಿ ಅತೀ ಹೆಚ್ಚು ತೀರ್ಥಾಟಕರು ತಲುಪಿದ್ದರೂ ಅವರಾಗಿ ನೂಕುನುಗ್ಗಲು ಇಲ್ಲದೆ ಸುಗಮವಾಗಿ ದೇವರದರ್ಶನ ಪಡೆಯಲು ಸಾಧ್ಯವಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.