ಬಂಗ್ರಮಂಜೇಶ್ವರ ಶಾಲೆಯಲ್ಲಿ ಮಣ್ಣು ದಿನಾಚರಣೆ
ಮಂಜೇಶ್ವರ: ಬಂಗ್ರಮಂಜೇಶ್ವರ ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ವಿಶ್ವ ಮಣ್ಣು ದಿನ ಆಚರಿಸಲಾಯಿತು. ಇದರಂಗವಾಗಿ ಹೈಸ್ಕೂಲ್ ವಿಭಾಗದ ಮಕ್ಕಳಿಗಾಗಿ ಮಣ್ಣು ಪರೀಕ್ಷೆ ಮತ್ತು ಜಾಗೃತಿ ಶಿಬಿರವನ್ನು ಆಯೋಜಿ ಸಲಾಗಿತ್ತು. ಕಾಸರಗೋಡು ಮಣ್ಣು ಪರೀಕ್ಷಾ ಲ್ಯಾಬ್ನ ಸಹಾಯಕ ನಿರ್ದೇಶಕಿ ರೇಷ್ಮಾ ಶಿಬಿರ ಉದ್ಘಾಟಿಸಿ ಮಣ್ಣಿನ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಎ. ಅಧ್ಯಕ್ಷತೆ ವಹಿಸಿದ್ದರು. ಶಾಲಾ ಕೌನ್ಸೆಲಿಂಗ್ ಸೆಲ್ನ ಕೌನ್ಸಿಲರ್ ಟಾಲ್ಸಿ, ಹಿರಿಯ ಶಿಕ್ಷಕಿ ಗಾಯತ್ರಿ, ಸ್ಟಾಫ್ ಕಾರ್ಯದರ್ಶಿ ಮೋಹನ ಯು ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಮಂಜೇಶ್ವರ ಕೃಷಿ ಭವನದಿಂದ ನೀಡಲಾದ ಮಾವಿನ ಗಿಡವನ್ನು ನೆಡಲಾಯಿತು. ಮಂಜೇಶ್ವರ ಕೃಷಿ ಭವನದ ಅಧಿಕಾರಿ ಶ್ರೀನಾಥ್ ಸ್ವಾಗತಿಸಿ, ಅಧ್ಯಾಪಕ ರಾಜೇಶ್ ಕುಮಾರ್ ನಿರೂಪಿಸಿದರು.