ಬಂಟ್ವಾಳದಿಂದ ಪರಾರಿಯಾದ ಫಾರ್ಮಸಿ ವಿದ್ಯಾರ್ಥಿನಿ, ಪ್ರಿಯತಮ ಕಾಞಂಗಾಡ್‌ನಲ್ಲಿ ಸೆರೆ

ಹೊಸದುರ್ಗ: ಪರಾರಿಯಾಗಿ ಕಾಞಂಗಾಡ್‌ಗೆ ತಲುಪಿದ ಕೂಲಿ ಕಾರ್ಮಿಕನಾದ ಪ್ರಿಯತಮ ಹಾಗೂ ಫಾರ್ಮಸಿ ವಿದ್ಯಾರ್ಥಿನಿಯಾದ ಪ್ರಿಯತಮೆಯನ್ನು ಕರ್ನಾಟಕ ಪೊಲೀಸರು  ಸೆರೆಹಿಡಿದಿದ್ದಾರೆ. ಬಂಟ್ವಾಳ ಉದ್ದೋಟ್ ನಿವಾಸಿಯೂ, ದೇರಳಕಟ್ಟೆಯಲ್ಲಿ ಫಾರ್ಮಸಿ ವಿದ್ಯಾರ್ಥಿನಿಯಾದ ಆಯಿಶತ್ ರಸ್ಮಾ (೧೮), ಪ್ರಿಯತಮ ಮುಹಮ್ಮದ್ ಸಿನಾನ್ (೨೩) ಎಂಬಿವರನ್ನು  ಕಾಞಂಗಾಡ್‌ನಿಂದ ಸೆರೆಹಿಡಿಯಲಾಗಿದೆ. ಈ ಇಬ್ಬರು ದೀರ್ಘಕಾಲದಿಂದ ಪ್ರೇಮದಲ್ಲಿದ್ದರೆಂದು ಹೇಳಲಾಗುತ್ತಿದೆ. ಅನಂತರ ಮುಹಮ್ಮದ್ ಸಿನಾನ್ ಗಲ್ಫ್‌ಗೆ ತೆರಳಿದ್ದನು.

ಆದರೆ ಪ್ರಿಯತಮೆ ತನ್ನಿಂದ ದೂರವಾಗಬಹುದೆಂಬ ಸಂಶಯದಿಂದ  ಗಲ್ಫ್‌ನಿಂದ ಊರಿಗೆ ತಲುಪಿದ ಮುಹಮ್ಮದ್ ಸಿನಾನ್ ಕೂಲಿ ಕೆಲಸ ನಡೆಸುತ್ತಿದ್ದನು. ಈ ಮಧ್ಯೆ ಪ್ರಿಯತಮೆಯ ಮದುವೆ ನಡೆಸಲು  ಸಾಧ್ಯತೆಯಿದೆಯೆಂದು ಸಂಶಯದ ಹಿನ್ನೆಲೆಯಲ್ಲಿ ಇವರು ಪರಾರಿಯಾಗಿರುವುದಾಗಿ ಹೇಳಲಾಗುತ್ತಿದೆ.   ನಾಲ್ಕು ದಿನಗಳ ಹಿಂದೆ ಈ ಇಬ್ಬರು ಪರಾರಿಯಾಗಿದ್ದರು. ಈ ಬಗ್ಗೆ  ರಸ್ಮಾಳ ಮನೆಯವರು ನೀಡಿದ ದೂರಿನಂತೆ ಬಂಟ್ವಾಳ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಇವರು ಕಾಞಂಗಾಡ್‌ನಲ್ಲಿರುವ ಮಾಹಿತಿ ಲಭಿಸಿತ್ತು.

Leave a Reply

Your email address will not be published. Required fields are marked *

You cannot copy content of this page