ಬಂದ್ಯೋಡು ಶಕ್ತಿ ಕ್ರೀಡಾ, ಸಾಂಸ್ಕೃತಿಕ, ಕಲಾ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ
ಉಪ್ಪಳ: ಶಕ್ತಿ ಕ್ರೀಡಾ ಹಾಗೂ ಸಾಂಸ್ಕöÈತಿಕ ಕಲಾ ಸಂಸ್ಥೆ ಶಕ್ತಿನಗರ ಬಂದ್ಯೋಡು ಇದರ ಆಶ್ರಯದಲ್ಲಿ ತಿರಂಗ ಟ್ರಸ್ಟ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಕಸೂರ್ಬಾ ಮೆಡಿಕಲ್ ಕಾಲೇಜ್ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಮಂಗಲ್ಪಾಡಿ ಅಡ್ಕ ಶ್ರೀ ಭಗವತೀ ಕ್ಷೇತ್ರ ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರದ ಕೃಷ್ಣ ಕಾರ್ನವರ್ ಉದ್ಘಾಟಿಸಿದರು. ಮಂಗಲ್ಪಾಡಿ ಹೆಲ್ತ್ ಇನ್ಸ್ಫೆಕ್ಟರ್ ಚಂದ್ರಶೇಖರ ತಂಬಿ, ಅಡ್ಕ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಕೃಷ್ಣ.ಪಿ, ಮಂಗಲ್ಪಾಡಿ ಪಂಚಾಯತ್ ಸದಸ್ಯ ಕಿಶೋರ್ ಕುಮಾರ್, ಕಸ್ತೂರ್ಬ ಮೆಡಿಕಲ್ ಕಾಲೇಜಿನ ವೈದ್ಯರಾದ ಅನೀಶ್, ಶಕ್ತಿ ಕ್ರೀಡಾ ಹಾಗೂ ಸಾಂಸ್ಕöÈತಿಕ ಕಲಾ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಉಪಸ್ಥಿತರಿದ್ದರು. ರಾಕೇಶ್ ಸ್ವಾಗತಿಸಿ, ಪ್ರಭಾಕರ್ ವಂದಿಸಿದರು.