ಬಂಧಿತ ಐಸಿಸ್ ಉಗ್ರರು ಕಾಸರಗೋಡು ಕೇಂದ್ರೀಕರಿಸಿ ‘ಇಸ್ಲಾಮಿಕ್ ಸ್ಟೇಟ್ ಮೋಡ್ಯೂಲ್’ ರೂಪೀಕರಿಸಲು ಯೋಜನೆ ಹಾಕಿದ್ದರು

ಕಾಸರಗೋಡು: ರಾಜಸ್ಥಾನ ಮತ್ತು ಉತ್ತರ ಪ್ರದೇಶ ಎಂಬೆಡೆಗಳಿಂದಾಗಿ ದಿಲ್ಲಿಯ ವಿಶೇಷ ಪೊಲೀಸ್ ತಂಡ ಬಂಧಿಸಿದ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್(ಐಸಿಸ್) ಭಯೋತ್ಪಾದಕರಾದ ಜಾರ್ಖಂಡ್ ನಿವಾಸಿ ಮೊಹಮ್ಮದ್ ಶಹನಾಸ್ ಆಲಂ (ಶಾಫಿ ಉಸಾಮ ೩೧), ಮೊಹಮ್ಮದ್ ಅರ್ಶಾದ್ ವಾರ್ಸಿ (೨೮) ಮತ್ತು ಉತ್ತರಪ್ರದೇಶ ಲಕ್ನೋದ ಮೊಹಮ್ಮದ್ ರಿಸ್ವಾನ್ ಅಶ್ರಫ್ (೩೦) ಎಂಬವರು ಕಾಸರಗೋಡನ್ನು ಕೇಂದ್ರೀಕರಿಸಿ ಇಸ್ಲಾಮಿಕ್ ಸ್ಟೇಟ್ ಮೋಡ್ಯೂಲ್ ರೂಪೀಕರಿಸುವ ಯೋಜನೆಯನ್ನೂ ಹಾಕಿಕೊಂಡಿದ್ದರು ಎಂಬ ಕಳವಳಕಾರಿ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಇದೇ ರೀತಿ ಈ ಹಿಂದೆ ತೃಶೂರ್‌ನಲ್ಲೂ ಇಂತಹ ಮೋಡ್ಯೂಲ್ ರೂಪೀಕರಿಸಿದ್ದ ಮುಲ್ಲಶ್ಶೇರಿ ನಿವಾಸಿ ಸೈಯ್ಯಿದ್ ನಬೀಲ್ ಅಹಮ್ಮದ್ ಎಂಬಾತನನ್ನು ಎನ್‌ಐಎ ಈ ಹಿಂದೆ ಬಂಧಿಸಿತ್ತು.

ನವರಾತ್ರಿ ಉತ್ಸವ  ಆರಂs ಗೊಳ್ಳಲಿರುವಂತೆಯೇ ಆ ವೇಳೆ ಕೇರಳ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಅತ್ಯುಘ್ರ ಬಾಂಬ್ ಸ್ಫೋಟ ನಡೆಸುವ ಸ್ಕೆಚ್‌ಗೂ ಈ ಉಗ್ರ ರೂಪು ನೀಡಿದ್ದರು. ಅದಕ್ಕಿರುವ ಅಂತಿಮ ಸಿದ್ಧತೆಯಲ್ಲಿ ನಿರತರಾಗಿರುವ ವೇಳೆಯಲ್ಲೇ ವಿಶೇಷ ಪೊಲೀಸ್ ತಂಡದ ಕೈಗೆ ಅವರು ಸಿಲುಕಿಬಿದ್ದಿದ್ದಾರೆ. ಅದರಿಂದಾಗಿ ಸಂಭಾವ್ಯ ಭಾರೀ ದೊಡ್ಡ ಸರಣಿ ಬಾಂಬ್ ಸ್ಫೋಟಗಳು ಅದೃಷ್ಟವಶಾತ್ ತಪ್ಪಿಹೋದಂತಾಗಿದೆಯೆಂದು ತನಿಖಾ ತಂಡ ತಿಳಿಸಿದೆ. ಬಂಧಿತರಾದ ಮೂವರು ಉಗ್ರರು  ಬಿ.ಟೆಕ್ ಇಂಜಿನಿ ಯರ್ ಪದವೀಧರರಾಗಿದ್ದಾರೆ. ಸ್ಫೋಟಕ ವಸ್ತು ನಿರ್ಮಿಸಲು ಇವರು ಅಗತ್ಯದ ರಾಸಾಯನಿಕ ಸಾಮಗ್ರಿಗಳು, ಮದ್ದುಗುಂಡುಗಳು,ಟೈಮರ್‌ಗಳು, ರಿಮೋಟ್ ಕಂಟ್ರೋಲ್‌ಗಳು ಇತ್ಯಾದಿಗಳನ್ನು ಸಂಗ್ರಹಿಸಿದ್ದು, ಅದನ್ನೂ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಈ ಮೂವರು ಪಾಕಿಸ್ತಾನವನ್ನು ಕೇಂದ್ರೀಕರಿಸಿ ಕಾರ್ಯವೆಸಗುತ್ತಿರುವ ಐಸಿಸ್ ಭಯೋತ್ಪಾದಕ ಸಂಘಟನೆಯ ಸದಸ್ಯರೂ ಆಗಿದ್ದಾರೆ. ಅವರು ಪಾಕಿಸ್ತಾನದ ಹ್ಯಾಂಡರ್‌ಗಳನ್ನು ಚಾಟ್ ಅಪ್ಲಿಕೇಶನ್ ಮೂಲಕ ಪದೇ ಪದೇ ಸಂಪರ್ಕಿಸುತ್ತಿದ್ದ ಸ್ಪಷ್ಟ ಮಾಹಿತಿಯೂ ತನಿಖಾ ತಂಡಕ್ಕೆ ಲಭಿಸಿದೆ.

ಬಂಧಿತ ಆರೋಪಿಗಳನ್ನು ಬಳಿಕ ನ್ಯಾಯಾಂಗ ಬಂಧನಕ್ಕೊಳಪಡಿಸಲಾ ಗಿತ್ತು.  ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರನ್ನು ದಿಲ್ಲಿ ಸ್ಪೆಷಲ್ ಸೆಲ್ ಪೊಲೀಸರು ಏಳು ದಿನಗಳ ತನಕ ಮತ್ತೆ ತಮ್ಮ ಕಸ್ಟಡಿಗೆ ಪಡೆದುಕೊಂಡು ಸಮಗ್ರ ವಿಚಾರಣೆ ನಡೆಸುತ್ತಿದ್ದಾರೆ. ಮಾತ್ರವಲ್ಲ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯೂ  ಇತರ ಕೇಂದ್ರ ತನಿಖಾ ತಂಡಗಳೂ ಇವರನ್ನು ಇನ್ನೊಂದೆಡೆ ವಿಚಾರಣೆಗೊಳಪಡಿಸುತ್ತಿದೆ.

ಬಾಂಬ್ ಸ್ಫೋಟ ನಡೆಸಲು ಈ ಮೂವರು  ಕರ್ನಾಟಕ, ಗೋವಾ, ಮತ್ತು ಆಂಧ್ರಪ್ರದೇಶದ ಅರಣ್ಯ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಿ ಬಾಂಬ್ ಸ್ಫೋಟ ಪರೀಕ್ಷೆಗಳನ್ನು ನಡೆಸಿದ್ದರೆಂಬ ಮಾಹಿತಿಯೂ ತನಿಖಾ ತಂಡಕ್ಕೆ ಲಭಿಸಿದೆ. ಮಾತ್ರವಲ್ಲ ಇವರು  ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಮಲೆನಾಡ ಪ್ರದೇಶಗಳಿಗೂ ಆಗಮಿಸಿ ಅಲ್ಲಿ ಐಸಿಸ್ ಪತಾಕೆಗಳನ್ನು ಸ್ಥಾಪಿಸಿ ಹಲವು ಫೋಟೋಗಳನ್ನು ತೆಗೆದಿದ್ದರು. ಅದರ ಫೋಟೋಗಳು ತನಿಖಾತಂಡಕ್ಕೆ ಲಭಿಸಿದೆ. ಆ ಹಿನ್ನೆಲೆಯಲ್ಲಿ ತನಿಖಾ ತಂಡ ಶೀಘ್ರ ಕಾಸರಗೋಡಿಗೂ ಆಗಮಿಸಿ ಇಲ್ಲಿಗೂ ತನಿಖೆ ವಿಸ್ತರಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page