ಬದಿಯಡ್ಕದಲ್ಲಿ ಅಧ್ಯಾಪಿಕೆಯ ಸರ ಎಗರಿಸಿದ ಆರೋಪಿಗಾಗಿ ಶೋಧ ತೀವ್ರ
ಬದಿಯಡ್ಕ: ಬದಿಯಡ್ಕದಲ್ಲಿ ಅಧ್ಯಾಪಿಕೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಆರೋಪಿಗಾಗಿ ಪೊಲೀ ಸರು ಶೋಧ ತೀವ್ರಗೊಳಿಸಿದ್ದಾರೆ. ಪೆರಡಾಲ ಶಾಲಾ ಅಧ್ಯಾಪಿಕೆಯಾ ಗಿರುವ ಅಶ್ವತಿ ಎಂಬವರ ಕುತ್ತಿಗೆಯಿಂದ ದುಷ್ಕರ್ಮಿಗಳು ಸರ ಎಗರಿಸಿ ಪರಾರಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಬೋಳುಕಟ್ಟೆಯ ಕ್ವಾರ್ಟರ್ಸ್ ನಿಂದ ಅಧ್ಯಾಪಿಕೆ ಪೆರಡಾಲ ಜಿಎಚ್‌ಎಸ್‌ಗೆ ಒಲದಾರಿ ಮೂಲಕ ನಡೆದುಹೋಗುತ್ತಿದ್ದಾಗ ಬಿಳಿ ಬಣ್ಣ್ಣದ ಸ್ಕೂಟರ್ ಆಗಮಿಸಿದೆ. ಆ ವೇಳೆ ಅಧ್ಯಾಪಿಕೆ ರಸ್ತೆ ಬದಿಗೆ ಸರಿದು ನಿಂತಿದ್ದರು. ಈ ವೇಳೆ ಸಮೀಪಕ್ಕೆ ತಲುಪಿದ ದುಷ್ಕರ್ಮಿ ಅಧ್ಯಾಪಿಕೆಯ ಕುತ್ತಿಗೆಯಿಂದ ಸರ ಎಗರಿಸಲು ಯತ್ನಿಸಿದ್ದಾನೆ. ಆದರೆ ಅಧ್ಯಾಪಿಕೆ ಸರವನ್ನು ಬಲವಾಗಿ ಹಿಡಿದುದರಿಂದ ಅದು ತುಂಡಾಗಿದ್ದು, ಇದರಿಂದ ಕೈಗೆ ಸಿಕ್ಕಿದ ತಾಳಿಯೊಂದಿಗೆ ದುಷ್ಕರ್ಮಿ ಪರಾರಿಯಾಗಿದ್ದಾನೆ.
ಇತ್ತೀಚೆಗೆ ಇದೇ ಪ್ರದೇಶದಲ್ಲಿ ಇನ್ನೋರ್ವೆ ಅಧ್ಯಾಪಿಕೆಯ ಸರವನ್ನು ದುಷ್ಕರ್ಮಿಗಳು ಎಗರಿಸಿದ್ದರು. ಬದಿಯಡ್ಕ ಪರಿಸರದಲ್ಲಿ ಚಿನ್ನದ ಸರ ಎಗರಿಸುವ ಕೃತ್ಯ ಹೆಚ್ಚಿದ್ದು, ಇದರಿಂದ ನಾಗರಿಕರಲ್ಲಿ ಭಯ ಹೆಚ್ಚಿದೆ. ಬದಿಯಡ್ಕದಲ್ಲಿ ವಿವಿಧ ಕಳ್ಳರು ಬೋಳುಕಟ್ಟೆಯಲ್ಲಿ ತಂಗುತ್ತಿದ್ದಾರೆಂದು ನಾಗರಿಕರು ಹೇಳುತ್ತಿದ್ದಾರೆ. ಲೀಗ್ ನೇತಾರ ಮಾಹಿನ್ ಕೇಳೋಟ್ ಪಂಚಾಯತ್ ಅಧ್ಯಕ್ಷರಾಗಿದ್ದಾಗ ಇಲ್ಲಿ ಅರ್ಧ ನಿರ್ಮಿಸಿ ಉಪೇಕ್ಷಿಸಿದ ಕಟ್ಟಡದಲ್ಲಿ ದುಷ್ಕರ್ಮಿಗಳು ತಂಗುತ್ತಿದ್ದಾರೆಂದು ದೂರಲಾಗಿದೆ.