ಬದಿಯಡ್ಕದಲ್ಲಿ ಕೇರಳ ಮರಾಟಿ ಯುವಜನ ವೇದಿಕೆ ಉದ್ಘಾಟನೆ
ಬದಿಯಡ್ಕ: ಕೇರಳ ಮರಾಟಿ ಯುವಜನವೇದಿಕೆ ಬದಿಯಡ್ಕ ಕಾಸರಗೋಡು ಇದರ ಉದ್ಘಾಟನೆ ಭಾನುವಾರ ಬದಿಯಡ್ಕದಲ್ಲಿ ಜರಗಿತು. ಪ್ರೊಫೆಸರ್ ರಾಮ ನಾಯ್ಕ್ ಪುತ್ತೂರು ದೀಪ ಬೆಳಗಿಸಿ ಉದ್ಘಾಟಿಸಿ ಮಾತ ನಾಡಿದರು. ಯುವಜನತೆ ಸಂಘಟಿತ ರಾದರೆ ಮಾತ್ರ ಸಮಾಜ ಬಲಿಷ್ಠವಾ ಗಲು ಸಾಧ್ಯವಿದೆ. ಊರಿನ ಯುವಕ ರೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕು ಎಂದು ಕರೆಯಿತ್ತರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾವಿದ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಚನಿಯಪ್ಪ ನಾಯ್ಕ್, ಕೇರಳ ಮರಾಟಿ ಶಾರದೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ ನಾಯ್ಕ್ ಕುಂಟಾಲುಮೂಲೆ, ಶಾರದೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ನಿವೃತ್ತ ಅಧ್ಯಾ ಪಕ ಈಶ್ವರ್ ನಾಯ್ಕ್ ಪೆರಡಾಲ, ಜಯಂತಿ ಚಕ್ರೇಶ್ವರ, ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷೆ ಕಮಲ ಪೆರ ಡಾಲ, ಜೊತೆಕಾರ್ಯದರ್ಶಿ ಸುಬ್ರಹ್ಮಣ್ಯ ಕನಕಪ್ಪಾಡಿ, ಕೆ.ಕೆ.ನಾಯ್ಕ್ ಕಾಡಮನೆ, ರಜನಿ ಕರಿಂಬಿಲ ಭಾಗವಹಿಸಿದರು. ಮರಾಟಿ ಸಮಾಜ ದವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಸರಿಯಾಗಿ ದೊರೆಯು ವುದಿಲ್ಲ ಸಹಿತ ವಿವಿದs ಬೇಡಿಕೆಗಳ ಈಡೇರಿಕೆಗೆ ಒಗ್ಗಟ್ಟಿನಿಂದ ಮುಂದುವರಿ ಯಲು ತೀರ್ಮಾನಿಸ ಲಾಯಿತು. ಇದೇ ಸಂದರ್ಭದಲ್ಲಿ ಕೇರಳ ಮರಾಟಿ ಯುವಜನವೇದಿಕೆಯ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಪ್ರಸಾದ್ ಕಿನ್ನಿಮಾಣಿ, ಉಪಾಧ್ಯಕ್ಷರಾಗಿ ಹರೀಶ್ ಮಾನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಚೇಕiÁðಡ್ಲು, ಕಾರ್ಯ ದರ್ಶಿಯಾಗಿ ಪ್ರಸನ್ನ ಪುತ್ತಿಗೆ, ಸಂಚಾಲ ಕರಾಗಿ ಲೋಕೇಶ್ ಅಡೂರು, ಸಹ ಸಂಚಾಲ ಕರಾಗಿ ಸದಾನಂದ ಬೆದ್ರಂಪಳ್ಳ, ಕೋಶಾದಿsಕಾರಿಯಾಗಿ ಮೋಹನ್ ಕೆಡೆಂಜಿ ಹಾಗೂ ೬೦ ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ವರ್ಷಾ ಲಕ್ಷ್ಮಣ ಪ್ರಾರ್ಥನೆ ಹಾಡಿದರು. ಸಂದೀಪ್ ಪೆರಡಾಲ ಸ್ವಾಗತಿಸಿ, ಉಮೇಶ್ ಕಾಡಮನೆ ವಂದಿಸಿದರು.