ಬದಿಯಡ್ಕದಲ್ಲಿ ಗೀತಾ ಜಯಂತಿ ಕಾರ್ಯಕ್ರಮ: ವಸಂತ ಪೈಗೆ ಅಭಿನಂದನೆ
ಬದಿಯಡ್ಕ: ಬದಿಯಡ್ಕ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಗೀತಾ ಜಯಂತಿ ಕಾರ್ಯಕ್ರಮ ಶ್ರೀರಾಮ ಭಜನಾ ಮಂದಿರದಲ್ಲಿ ಜರಗಿತು. ಗೀತಾವಾಚನ, ಗೀತೋಪದೇಶ ಸಂದೇಶ ನೀಡಲಾ ಯಿತು. ಇದೇ ವೇಳೆ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಧಾರ್ಮಿಕ ಮುಂದಾಳು ಬಿ. ವಸಂತ ಪೈ ಯವರನ್ನು ಅಭಿನಂದಿಸಲಾಯಿತು. ಗೀತಾವಾಚನದಲ್ಲಿ ಭಾಗವಹಿಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಸಮಾಜ ಸಂಘಟ ನೆಯ ಅಧ್ಯಕ್ಷ ಗೋಕುಲ ದಾಸ್ ಪೈ, ಕಾರ್ಯದರ್ಶಿ ಜ್ಞಾನದೇವ ಶೆಣೈ, ಕೋಶಾಧಿಕಾರಿ ರಾಘವೇಂದ್ರ ಪ್ರಸಾದ್ ಸಹಿತ ಹಲವರು ಉಪಸ್ಥಿತರಿದ್ದರು.