ಬದಿಯಡ್ಕದಲ್ಲಿ ವರ್ಕ್ಶಾಪ್ನಿಂದ ಒಂದು ಲಕ್ಷ ರೂಪಾಯಿಗಳ ಉಪಕರಣಗಳು ಕಳವು
ಬದಿಯಡ್ಕ: ಬದಿಯಡ್ಕದ ವರ್ಕ್ಶಾಪ್ನಿಂದ ೧ ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ಉಪಕರಣಗಳನ್ನು ಕಳವು ನಡೆಸಲಾಗಿದೆ. ನೆಕ್ರಾಜೆ ಅರ್ತಿಪಳ್ಳದ ಕೋಂಬ್ರಾಜೆ ಹೌಸ್ನ ತಿಮೋತಿ ಕ್ರಾಸ್ತಾರ ಮಾಲಕತ್ವದಲ್ಲಿ ಬೋಳುಕಟ್ಟೆಯಲ್ಲಿರುವ ವರ್ಕ್ಶಾಪ್ನಿಂದ ಈ ಉ ಕರಣಗಳನ್ನು ದೋಚಲಾಗಿದೆ. ಮೊನ್ನೆ ಸಂಜೆ ವರ್ಕ್ಶಾಪ್ ಮುಚ್ಚಲಾಗಿತ್ತು.
ನಿನ್ನೆ ಬೆಳಿಗ್ಗೆ ತೆರೆಯಲು ತಲುಪಿದಾಗ ವರ್ಕ್ ಶಾಪ್ನ ಬಾಗಿಲು ಮುರಿದು ಜಾಕಿ ಮತ್ತಿತರ ಬೆಲೆ ಬಾಳುವ ಉಪಕರಣಗಳನ್ನು ಕಳ್ಳರು ಕಳವು ನಡೆಸಿರುವುದು ತಿಳಿದು ಬಂದಿದೆ. ತಿಮೋತಿ ಕ್ರಾಸ್ತಾರ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಇದೇ ವೇಳೆ ಈ ಕಳವು ಪ್ರಕರಣಕ್ಕೆ ಸಂಬಂಧಿಸಿ ಸಂಶಯಕ್ಕೆ ಡೆಯಾದ ಓರ್ವನ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಕಳವುಗೈದ ಉಪಕರಣಗಳನ್ನು ಕಾಸರಗೋಡಿನ ಅಂಗಡಿಯೊಂ ದರಲ್ಲಿ ಮಾರಾಟ ಮಾಡಿರುವು ದಾಗಿಯೂ ಸೂಚನೆ ಲಭಿಸಿದೆ. ಈ ಕಳವಿನಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಒಳಗೊಂಡಿರಬಹುದೆಂದು ಪೊಲೀಸರು ಸಂಶಯಿಸಿದ್ದಾರೆ. ಕಳವಿಗೀಡಾದ ಉಪಕರಣಗಳು ಹೆಚ್ಚು ಭಾರವುಳ್ಳದ್ದಾಗಿದೆ. ಆದ್ದರಿಂದ ಇತರರ ಸಹಾಯದಿಂದ ವಾಹನಕ್ಕೆ ತುಂಬಿಸಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.