ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯಿಂದ ಶಾರದೋತ್ಸವ ೨೩ರಿಂದ

ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿ ಬದಿಯಡ್ಕ ಕಾಸರಗೋಡು ಇದರ 16ನೇ ವರ್ಷದ ಶಾರದೋತ್ಸವ ಬದಿಯಡ್ಕ ಶ್ರೀ ಗುರುಸದನದಲ್ಲಿ ಅ.23, 24ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 23ರಂದು ಬೆಳಗ್ಗೆ 6.30ಕ್ಕೆ ಶ್ರೀಶಾರದಾ ವಿಗ್ರಹ ಪ್ರತಿಷ್ಠೆ, ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ಟರ ಪೌರೋಹಿತ್ಯದಲ್ಲಿ ಪ್ರಾರ್ಥನೆ, ಬೆಳಗಿನ ಪೂಜೆ, ಶ್ರೀ ಮಹಾಗಣಪತಿ ಹೋಮ, 8 ಗಂಟೆಯಿAದ ಶ್ರೀ ಧರ್ಮಶಾಸ್ತಾ ಭಜನಾ ಸಂಘ ನೀರ್ಚಾಲು ಇವರಿಂದ ಭಜನೆ, 9 ಗಂಟೆಗೆ ವಸಂತ ನಾಯ್ಕ ಪೆರುಮುಂಡ ಅವರಿಂದ ಧ್ವಜಾರೋಹಣ, ಆಯುಧಪೂಜೆ, 10.30ಕ್ಕೆ ದಿ| ಆರ್.ಚಕ್ರೇಶ್ವರ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನÄ ಗಡಿನಾಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಚನಿಯಪ್ಪ ನಾಯ್ಕ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಸಿಪಿಸಿಆರ್‌ಐಯ ನಾರಾಯಣ ನಾಯ್ಕ ಪಳ್ಳಕಾನ ಭಾಗವಹಿಸುವರು. ಶಾರದೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ, ಶ್ರೀ ಮಹಮ್ಮಾಯಿ ಅಮ್ಮನವರ ದೇವಿಪಾತ್ರಿ ಐತ್ತಪ್ಪ ನಾಯ್ಕ ಬಜಕೂಡ್ಲು ಅವರಿಗೆ ಸನ್ಮಾನ, ಯುವಕೃಷಿಕ ವಸಂತ ಕುಂಟಾಲುಮೂಲೆ ಅವರಿಗೆ ಅಭಿನಂದನೆ ನಡೆಯಲಿದೆ. ಡಾ| ಕೇಶವ ಖಂಡಿಗೆ, ಡಾ| ಶಿವ ನಾಯ್ಕ ಶುಭಾಶಂಸನೆ ಗೈಯುವರು. ಮಧ್ಯಾಹ್ನ ಭಕ್ತಿಗೀತೆ, ಭರತನಾಟ್ಯ, ಸಮೂಹ ನೃತ್ಯ, ಮರಾಟಿ ಭಾಷೆಯಲ್ಲಿ ಭಾಷಣ, ಮಿಮಿಕ್ರಿ ಪ್ರದರ್ಶನಗೊಳ್ಳಲಿದೆ. ಸಂಜೆ 5 ಗಂಟೆಯಿAದ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಜಯರಾಮ ಪಾಟಾಳಿ ಪಡುಮಲೆ ಇವರು ರಚಿಸಿ ನಿರ್ದೇಶಿಸಿದ ಕನ್ನಡ, ತುಳು, ಮಲೆಯಾಳಂ, ಮರಾಟಿ ಭಾಷೆ ಮಿಶ್ರಿತ ಮರಾಟಿ ಜನಾಂಗದ ಆಧಾರಿತ ಯಕ್ಷಗಾನ ಶಿವಭೈರವ ಮಹಮ್ಮಾಯಿ ಪ್ರದರ್ಶನಗೊಳ್ಳಲಿದೆ.
24ರಂದು ಬೆಳಗ್ಗೆ 7 ಗಂಟೆಗೆ ಉಷಃಪೂಜೆ, ಅಯ್ಯಪ್ಪ ಭಜನಾ ಮಂಡಳಿ ಬಣ್ಪುತ್ತಡ್ಕ ಇವರಿಂದ ಭಜನೆ, ವಿದ್ಯಾರಂಭ, 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜಗೋಪಾಲ ನವಕಾನ ಅಧ್ಯಕ್ಷತೆ ವಹಿಸುವರು.. ಕೆ.ಎಸ್.ಇ.ಬಿ.ಎಲ್ ತಿರುವನಂತಪುರ ನಿರ್ದೇಶಕ ಸುರೇಂದ್ರನ್ ಪಿ., ಉಡುಪಿ ಮಹಾತ್ಮಾಗಾಂದಿs ಮೆಮೋರಿಯಲ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಪ್ರವೀಣ ಕುಮಾರಿ ಎಂ.ಕೆ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಯುವ ಯಕ್ಷಗಾನ ಕಲಾವಿದ ಪ್ರಸಾದ್ ಕಿನ್ನಿಮಾಣಿ ಇವರಿಗೆ ಅಭಿನಂದನೆ. ನಿವೃತ್ತ ಸೈನಿಕ ಸದಾಶಿವ ನಾಯ್ಕ ಖಂಡಿಗೆ ಅವರಿಗೆ ಸನ್ಮಾನ, ಆರ್. ಚಕ್ರೇಶ್ವರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ, ಹೊಸಂಗಡಿ ಅನಂತ ಗ್ಯಾಸ್ ಏಜೆನ್ಸಿಯ ಮಾಲಕಿ ಶೋಭಾ ಗೋಪಾಲ, ಶಾರದೋತ್ಸವ ಸಮಿತಿಯ ಸ್ಥಾಪಕ ಕಾರ್ಯದರ್ಶಿ ಕೃಷ್ಣ ನಾಯ್ಕ ಬದಿಯಡ್ಕ ಅವರಿಗೆ ಸನ್ಮಾನ, ಮಂಗಳೂರು ಜಿಲ್ಲಾ ಮರಾಟಿ ಸಂರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಮಲ ಮಹಾಲಿಂಗ ನಾಯ್ಕ ಅವರಿಂದ ಶುಭಾಶಂಸನೆ. ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷೆ ಕಮಲ ಪೆರಡಾಲ, ಸಹಾಯಕ ಇಂಜಿನಿಯರ್ ಸುಬ್ಬಣ್ಣ ನಾಯ್ಕ, ಚೋಮನಾಯ್ಕ ಬಾಲಡ್ಕ ಉಪಸ್ಥಿತರಿರುವರು. ನಂತರ ಶ್ರೀ ಶಾರದಾ ದೇವಿಯ ಶೋಭಯಾತ್ರೆ ಆರಂಭವಾಗಲಿದೆ. ಸಿಂಗಾರಿಮೇಳ, ಕುಣಿತ ಭಜನೆ, ಮುತ್ತುಕೊಡೆಗಳೊಂದಿಗೆ ಶ್ರೀದೇವಿಯ ಮೆರವಣಿಗೆಯು ಗುರುಸದನದಿಂದ ಹೊರಟು ಬದಿಯಡ್ಕ ಪೇಟೆಯಲ್ಲಿ ಸಾಗಿ ಪೆರಡಾಲ ವರದಾ ನದಿಯಲ್ಲಿ ವಿಗ್ರಹ ಜಲಸ್ಥಂಭನಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page