ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವಿಶ್ವ ದಾಖಲೆ

ಬದಿಯಡ್ಕ: ಮೂರು ನಿಮಿಷ ಗಳಲ್ಲಿ ಭಗವದ್ಗೀತೆಯ 18 ಅಧ್ಯಾಯದ 700 ಶ್ಲೋಕಗಳನ್ನು ಸಂಸ್ಕೃತದಲ್ಲಿ ಬರೆದು ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ವಿಶ್ವದಾಖಲೆಯತ್ತ ಹೆಜ್ಜೆ ಇಟ್ಟಿದ್ದಾರೆ. ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ಅಮೃತಸರ ಪಂಜಾಬ್ ಇವರ ಅನುಮೋದನೆ ಮೇರೆಗೆ 100 ವಿದ್ಯಾರ್ಥಿಗಳು ಸೇರಿ ಒಬ್ಬೊಬ್ಬರು ಏಳು ಶ್ಲೋಕದಂತೆ ಗಣ್ಯರ ಉಪಸ್ಥಿತಿಯಲ್ಲಿ ಬರೆದಿದ್ದಾರೆ.

ಸಂಸ್ಕೃತ ಲಿಪಿಯಲ್ಲಿಯೇ ಶ್ಲೋಕಗಳನ್ನು ಬರೆದಿದ್ದಾರೆ. ಶಾಲಾ ಸಭಾಂಗಣದಲ್ಲಿ ನಡೆದ ದಾಖಲೀ ಕರಣ ಕಾರ್ಯಕ್ರಮದಲ್ಲಿ ಕುಂಬಳೆ ಉಪಜಿಲ್ಲಾ ಶಿಕ್ಷಣ ಅಧಿಕಾರಿ ಕಚೇರಿಯ ಸುಪರಿಂಟೆಂಡೆಂಟ್ ಕರುಣಾಕರ ಬಿ. ಮೇಲ್ನೋಟ ವಹಿಸಿದರು. ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಮತ್ತು ತಂಡ ಸಹಾಯ ಮಾಡಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ, ಶಿಕ್ಷಕವೃಂದ, ವ್ಯವಸ್ಥಾಪಕ ಜಯಪ್ರಕಾಶ್ ಪಜಿಲ, ಆಡಳಿತ ಮಂಡಳಿ ಸದಸ್ಯ ಮಧುಸೂದನ ತಿಮ್ಮಕಜೆ ಸಹಿತ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page