ಬಳ್ಳೂರು ಮುಣ್ಚಿತ್ತಡ್ಕ ಅಣೆಕಟ್ಟು ಉಪಯೋಗಶೂನ್ಯ

ಪೈವಳಿಕೆ: ಪಂಚಾಯತ್‌ನ ೭ನೇ ವಾರ್ಡ್ ಬಳ್ಳೂರು ಮುಣ್ಚಿತ್ತಡ್ಕ ಹೊಳೆಗೆ ನಿರ್ಮಿಸಿದ ಅಣೆಕಟ್ಟು ಉಪಯೋಗಶೂನ್ಯವಾಗುತ್ತಿದೆಯೆಂದು ಕೃಷಿಕರು ತಿಳಿಸಿದ್ದಾರೆ. ಅಣೆಕಟ್ಟು ನೀರು ಸಂಗ್ರಹಿಸಿಡಬೇಕಾದರೆ ಅದರ ಹಲಗೆ ಗಳನ್ನು ಹಾಕಬೇಕಾಗಿದೆ. ಆದರೆ ಅಣೆಕಟ್ಟಿನ ಹಲಗೆಗಳು ಶೆಡ್‌ನಲ್ಲಿ ಬಿದ್ದುಕೊಂಡಿದ್ದು ಉಪಯೋಗಶೂನ್ಯ ವಾಗುತ್ತಿದೆ. ಈ ಪರಿಸರದ ಕೃಷಿಕರ ಕೃಷಿಗೆ ನೀರುಣಿಸಲು ನಿರ್ಮಿಸಿದ ಈ ಅಣೆಕಟ್ಟಿನ ಹಲಗೆಯನ್ನು ಬೇಸಿಗೆ ಯಲ್ಲಿ ಹಾಕಿ ನೀರು ಸಂಗ್ರಹಿಸಲಾ ಗುತ್ತಿದೆ. ಆದರೆ ಕಳೆದ ವರ್ಷ ಮತ್ತು ಈ ವರ್ಷ ಈ ಕಾರ್ಯ ನಡೆಸಲಾಗಿಲ್ಲ. ಆದ್ದರಿಂದ ಈ ಪ್ರದೇ ಶದಲ್ಲಿ ನೀರಿನ ಒರತೆ ಕಡಿಮೆಯಾಗಿ ಕೊರತೆ  ಉಂಟಾಗುತ್ತಿದೆಯೆಂದು ಸಳೀಯರು ತಿಳಿಸಿದ್ದಾರೆ.

ಸಂಬಂಧಪಟ್ಟವರು ಅಣೆಕಟ್ಟಿಗೆ ಹಲಗೆಯನ್ನು ಹಾಕಿ ಈಗಲೇ ನೀರನ್ನು ಸಂಗ್ರಹಗೊಳ್ಳುವಂತೆ ಮಾಡಬೇಕೆಂದು ಆಗ್ರಹಿಸಿದ್ದು, ಈ ಬಗ್ಗೆ ಪಂಚಾಯ ತ್‌ನಲ್ಲೂ ಒತ್ತಾಯಿಸಿರುವುದಾಗಿ ವಾರ್ಡ್ ಪ್ರತಿನಿಧಿ ಜಯಲಕ್ಷ್ಮಿ ಭಟ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page