ಬಸ್ನಡಿಗೆ ಬಿದ್ದು ಪ್ರಯಾಣಿಕ ದಾರುಣ ಮೃತ್ಯು
ಮುಳ್ಳೇರಿಯ: ಬಸ್ನಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ನಿನ್ನೆ ಗಾಳಿಮುಖ ದಲ್ಲಿ ಸಂಭವಿಸಿದೆ.ಗಾಡಿಗುಡ್ಡೆ ಬಳಿಯ ಕೋಳಿಕ್ಕಾಲ್ ನಿವಾಸಿ ಕುಂಞಿರಾಮ ಮಣಿಯಾಣಿ (೭೦) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಇವರು ನಿನ್ನೆ ಗಾಳಿಮುಖಕ್ಕೆ ತೆರಲಿದ್ದಾರೆನ್ನಲಾಗಿದೆ. ಬಸ್ಸಿನಿಂದಿಳಿದು ರಸ್ತೆ ದಾಟುವ ವೇಳೆ ಅದೇ ಬಸ್ನಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ತಕ್ಷಣ ಮೃತಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದರು.ಮೃತರು ಪತ್ನಿ ನಾರಾಯಣಿ, ಮಕ್ಕಳಾದ ಮಣಿ, ಸಂತೋಷ್, ಸರೋಜಿನಿ, ಶ್ಯಾಮಲ, ಸಾವಿತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.