ಬಸ್‌ನಲ್ಲಿ ಸಾಗಿಸುತ್ತಿದ್ದ 18ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಮಂಜೇಶ್ವರ: ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಸಾಗಿಸುತ್ತಿದ್ದ 18 ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವನನ್ನು ನಿನ್ನೆ ಅಪರಾಹ್ನ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ತಂಡ ಸೆರೆ ಹಿಡಿದಿದೆ. ಅಬ ಕಾರಿ ತಂಡ ಮತ್ತು ಕೆಇಎಂಯು ಟೀಮ್ ಜಂಟಿಯಾಗಿ ನಡೆಸಿದ ವಾಹನ ತಪಾಸಣೆ ವೇಳೆ ಕಾಸರಗೋಡು ಕೂಡ್ಲು ವಿವೇಕಾನಂದನಗರ ನಿವಾಸಿ ಅಂತಪ್ಪ ಗಟ್ಟಿಯ ಪುತ್ರ ವಿಠಲ ಗಟ್ಟಿ (50) ಎಂಬಾತನನ್ನು ಸೆರೆ ಹಿಡಿಯಲಾಗಿದೆ.
ಚೆಕ್‌ಪೋಸ್ಟ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಜಿ. ಪ್ರಸನ್ನ ಹಾಗೂ ತಂಡ ಈತನನ್ನು ಸೆರೆ ಹಿಡಿದಿದ್ದು, ದಾಳಿಯಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ ಸುನೀಶ್ ಮೋನ್ ಕೆ.ವಿ, ಮುಹಮ್ಮದ್ ಕಬೀರ್ ಬಿ.ಎಸ್, ನಿದೀಶ್ ವೈಕತ್, ಶಿಜಿತ್ ಕೆ.ವಿ, ಗೋಪಿ ಕೆ, ರವೀಂದ್ರನ್ ಎಂ.ಕೆ, ರಾಧಾಕೃಷ್ಣನ್ ಜೊತೆಗಿದ್ದರು. ಆರೋಪಿಯನ್ನು ಹಾಗೂ ವಶಪಡಿಸಿದ ಸಾಮಗ್ರಿಗಳನ್ನು ಮುಂದಿನ ಕ್ರಮಗಳಿಗಾಗಿ ಕುಂಬಳೆ ರೇಂಜ್ ಕಚೇರಿಗೆ ಹಾಜರುಪಡಿಸಲಾಗಿದೆ.