ಬಸ್‌ನಿಂದ ಹೊರಕ್ಕೆಸೆಯಲ್ಪಟ್ಟು ವಿದ್ಯಾರ್ಥಿಗೆ ಗಾಯ

ಕುಂಬಳೆ:  ಬಸ್‌ನ ಬಾಗಿಲು ತೆರೆದು ಹೊರಕ್ಕೆ ಎಸೆಯಲ್ಪಟ್ಟು  ವಿದ್ಯಾರ್ಥಿ ಗಾಯಗೊಂಡ ಘಟನೆ ನಡೆದಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಆರಿಕ್ಕಾಡಿಯ ಮುಹಮ್ಮದ್ ಮುಫೀದ್ (೧೪) ಎಂಬಾತ ಗಾಯಗೊಂಡಿದ್ದಾನೆ. ಆರಿಕ್ಕಾಡಿಯಲ್ಲಿ ನಿನ್ನೆ ಈ ಅಪಘಾತ ಸಂಭವಿಸಿದೆ. ಈತನನ್ನು ಕುಂಬಳೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಿಟಿಎ ಅಧ್ಯಕ್ಷ ಎ.ಕೆ. ಆರಿಫ್, ಎಂಪಿಟಿಎ ಅಧ್ಯಕ್ಷೆ ವಿನೀಶ, ಸ್ಟಾಫ್ ಸೆಕ್ರೆಟರಿ ದಿನೇಶ್ ಕುಂಬಳೆ ಎಂಬಿವರು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಯನ್ನು ಸಂದರ್ಶಿಸಿದರು.

Leave a Reply

Your email address will not be published. Required fields are marked *

You cannot copy content of this page