ಬಸ್ ಕಂಡಕ್ಟರ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಸೀತಾಂಗೋಳಿ: ಬಸ್ ಕಂಡಕ್ಟರ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೀತಾಂಗೋಳಿ ಬಳಿಯ ಪಳ್ಳತ್ತಡ್ಕ ನಿವಾಸಿ ರಾಮ ಭಂಡಾರಿ ಎಂಬವರ ಪುತ್ರ ದಿನೇಶ್ (54) ಮೃತಪಟ್ಟ ವ್ಯಕ್ತಿ. ಕುಂಬಳೆ-ಮುಳ್ಳೇರಿಯ ರೂಟ್‌ನಲ್ಲಿ ಸಂಚರಿಸುವ ಗುರುವಾಯೂರಪ್ಪನ್ ಬಸ್‌ನ ಕಂಡಕ್ಟರ್ ಆಗಿದ್ದ ಇವರು ಒಂದು ವಾರದಿಂದ ರಜೆಯಲ್ಲಿದ್ದರು. ನಿನ್ನೆ ಸಂಜೆ ೫.೩೦ರ ವೇಳೆ ಮನೆಯಿಂ ದ ಹೊರಗೆ ತೆರಳಿದ್ದ ದಿನೇಶ್ ರಾತ್ರಿ ಯಾದರೂ  ಮರಳಿ ಬಂದಿರಲಿಲ್ಲ. ಇದರಿಂದ ಅವರ ಮೊಬೈಲ್‌ಗೆ ಮನೆ ಯವರು ಕರೆಮಾಡಿದಾಗ  ರಿಂಗಣಿಸುತ್ತಿ ದ್ದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಪೆರ್ಣೆ ಬಳಿಯ ಹಿತ್ತಿಲಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಮುಂಜಾನೆ 1.30ರ ವೇಳೆ ಮೃತದೇಹ ಪತ್ತೆಯಾ ಗಿದೆ. ವಿಷಯ ತಿಳಿದ ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ  ಕಾಸರಗೋಡು ಜನ ರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಮೃತರು ತಂದೆ, ತಾಯಿ ಸೀತಾ, ಪತ್ನಿ ಜಲಜಾ, ಮಕ್ಕಳಾದ ಕ್ಷಮ, ಪೂಜಾಲಕ್ಷ್ಮಿ, ಶ್ರೀಜಿತ್, ಸಹೋ ದರರಾದ ಜಯಚಂದ್ರ, ಅವಿನಾಶ್, ಸಹೋದರಿ ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page