ಜುಗಾರಿನಿರತ ಮೂವರ ಸೆರೆ

ಉಪ್ಪಳ: ಜುಗಾರಿ ನಿರತ ಮೂರು ಮಂದಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿ ಅವರ ಕೈಯಿಂದ ೬ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಕೋಡಿಬೈಲು  ರೈಸಾನ್ ಮಂಜಿಲ್‌ನ ಅಬ್ದುಲ್ ಎಂ.ಎಸ್ (62), ಅಂಗಡಿಪದವು ಶಾಂತಿನಗರದ ಪ್ರಶಾಂತ್ ಎಸ್ (44), ಕಡಂಬಾರ್ ಜುಮಾ ಮಸೀದಿ ಬಳಿಯ ಮೊಯ್ದೀನ್ ಅಬ್ಬ (52) ಎಂಬಿವರು ಬಂಧಿತ ವ್ಯಕ್ತಿಗಳಾಗಿ ದ್ದಾರೆ. ನಿನ್ನೆ ರಾತ್ರಿ 11.30ರ ವೇಳೆ ಬಂಗ್ರಮಂಜೇಶ್ವರ ಬಳಿಯ ವಾಮಂ ಜೂರಿನ ಖಾಲಿ ಹಿತ್ತಿಲಲ್ಲಿ ಜುಗಾರಿ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್.ಐ ಅರ್ಜುನ್ ಅರವಿಂದ್ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ.

RELATED NEWS

You cannot copy contents of this page