ಕೊಚ್ಚಿ: ದಕ್ಷಿಣಕನ್ನಡ ಜಿಲ್ಲೆಯ ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು (32) ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರನ್ನು ಎನ್ಐಎ ಬಂಧಿಸಿದೆ.
ಕೊಡಗು ಸೋಮವಾರಪೇ ಟೆಯ ಅಬ್ದುಲ್ ನಾಸಿರ್ (41), ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಯ್ಯೆಗುಡ್ಡೆ ನಿವಾಸಿ ನೌಶಾದ್ (32) ಬಂಧಿತ ಆರೋಪಿಗಳು. ಎನ್ಐಎಯ ಬೆಂಗಳೂರು ಮತ್ತು ಕೊಚ್ಚಿ ಘಟಕ ಅಧಿಕಾರಿಗಳ ತಂಡ ನಡೆಸಿದ ಜಂಟಿ ಕಾರ್ಯಾಚರಣೆ ಯಲ್ಲಿ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಅಬ್ದುಲ್ ನಸೀರ್ನನ್ನು ಕೊಚ್ಚಿ ಪಳ್ಳುರುತ್ತಿ ಯಿಂದ ಹಾಗೂ ನೌಶಾದ್ ನನ್ನು ತಮಿಳುನಾಡಿನಿಂದ ಬಂಧಿಸಲಾ ಗಿದೆ. ಬಳಿಕ ಇವರನ್ನು ಬೆಂಗಳೂರಿಗೆ ತಲು ಪಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಪ್ರವೀಣ್ ನೆಟ್ಟಾರು ಅವರನ್ನು ಕೊಲೆಗೈಯ್ಯುವ ವೇಳೆ ಆರೋಪಿಗಳು ಸಂಚರಿಸುತ್ತಿದ್ದ ಕಾರನ್ನು ಚಲಾಯಿಸು ತ್ತಿದ್ದುದು ನೌಶಾದ್ ಆಗಿದ್ದಾನೆಂದು ಎನ್ಐಎ ತಿಳಿಸಿದೆ. ಈ ಇಬ್ಬರ ಬಂಧನದೊಂದಿಗೆ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳ ಸಂಖ್ಯೆ 25ಕ್ಕೇರಿದೆ. ಇನ್ನೂ ಐವರು ಆರೋಪಿಗಳನ್ನು ಬಂಧಿಸಲು ಬಾಕಿಯಿದ್ದು ಅವರಿಗಾಗಿ ಎನ್ಐಎ ಶೋಧ ಮುಂದುವರಿಸಿದೆ. ಬಂಧಿತ ಆರೋಪಿ ಅಬ್ದುಲ್ ನಾಸಿರ್ ನಿಷೇಧಿತ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಕ್ರಿಯ ಕಾರ್ಯ ಕರ್ತನಾಗಿದ್ದಾನೆ. ತಲೆಮರೆಸಿಕೊಂಡು ವಾಸಿಸಲು ಆತ ನಕಲಿ ಹೆಸರು ಹಾಗೂ ವಿಳಾಸ ನೀಡಿದ್ದನೆಂದೂ ಆದ್ದರಿಂದ ಆತನಿಗೆ ಸಹಾಯವೊದ ಗಿಸಿದ ವ್ಯಕ್ತಿಗಳನ್ನೂ ಆರೋಪಿ ಗಳನ್ನಾಗಿ ಸೇರ್ಪಡೆಗೊಳಿ ಸಲಾಗುವುದೆಂದು ಎನ್ಐಎ ಹೇಳಿದೆ. ತಲೆಮರೆಸಿ ಕೊಂಡಿದ್ದ ಆರೋಪಿ ಅಬ್ದುಲ್ ನಸೀರ್ನ ಬಗ್ಗೆ ಮಾಹಿತಿ ನೀಡುವವರಿಗೆ ಎನ್ಐಎ ಎರಡು ಲಕ್ಷ ರೂ. ಪಾರಿ ತೋಷಕ ಘೋಷಿಸಿತ್ತು. ಒಂದು ಸಮು ದಾಯದವರಲ್ಲಿ ಭೀತಿ, ಕೋಮುದ್ವೇಷ ಮೂಡುವಂತೆ ಮಾಡುವುದರ ಜೊತೆಗೆ ಅಶಾಂತಿ ಸೃಷ್ಟಿಸಲು ಹೂಡಲಾದ ಸಂ ಚಿನ ಭಾಗವಾಗಿ ಪ್ರವೀಣ್ ನೆಟ್ಟಾರುರನ್ನು ಕೊಲೆಗೈಯ್ಯಲಾಗಿತ್ತೆಂದು ನ್ಯಾಯಾ ಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಎನ್ಐಎ ತಿಳಿಸಿತ್ತು.
ಯುವಮೋರ್ಛಾದ ದಕ್ಷಿಣಕನ್ನಡ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದ ಪ್ರವೀಣ್ ನೆಟ್ಟಾರುರನ್ನು 2022 ಜುಲೈ 26ರಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಬೆಳ್ಳಾರೆಯಲ್ಲಿ ಆರೋಪಿಗಳು ಕೊಲೆಗೈದಿದ್ದರು. ಬೆಳ್ಳಾರೆಯಲ್ಲಿ ಕೋಳಿ ಮಾರಾಟದಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಅಂಗಡಿಮುಚ್ಚಿ ಮರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ವಾಹನಗಳಲ್ಲಿ ತಲುಪಿದ ದುಷ್ಕರ್ಮಿಗಳು ಮಾರಕಾಯು ಧಗಳಿಂದ ಪ್ರವೀಣ್ ನೆಟ್ಟಾರುರನ್ನು ಬರ್ಭರವಾಗಿ ಕಡಿದು ಕೊಲೆಗೈದಿದ್ದರು. ಈ ಘಟನೆ ಇಡೀ ದಕ್ಷಿಣಕನ್ನಡ ಜಿಲ್ಲೆಯನ್ನೇ ನಡುಗಿಸಿತ್ತು. ಈ ಪ್ರಕರಣದ ಬಗ್ಗೆ ಮೊದಲು ಪೊಲೀಸರು ತನಿಖೆ ನಡೆಸಿದ್ದರು. ನಂತರ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು.





