ಕಾಸರಗೋಡು: ಜನಗಣತಿ ಕರ್ತವ್ಯದ ಮಧ್ಯೆ ಸಾಕುನಾಯಿ ಕಚ್ಚಿ ಅಧ್ಯಾಪಿಕೆ ಗಾಯಗೊಂಡಿದ್ದಾರೆ. ಪುತ್ತಿಗೆ ಐಡೆಡ್ ಜ್ಯೂನಿಯರ್ ಬೇಸಿಕ್ ಶಾಲಾ ಅಧ್ಯಾಪಿಕೆ ಹಾಗೂ ಇರಿಯಣ್ಣಿ ನಿವಾಸಿ ಇ. ಶ್ರೀಜ (40) ಗಾಯಗೊಂಡವರು. ನಿನ್ನೆ ಸಂಜೆ 6 ಗಂಟೆಗೆ ಪುತ್ತಿಗೆ ಹೆಡ್ಡರಕಟ್ಟೆ ಉನ್ನತಿಯಲ್ಲಿ ನಾಯಿ ಕಚ್ಚಿದೆ. ಅಧ್ಯಾಪಿಕೆ ಸೆನ್ಸಸ್‌ಗಾಗಿ ತಲುಪಿದಾಗ ಕಟ್ಟಿಹಾಕಿದ್ದ ನಾಯಿ ಸಂಕೋಲೆ ತುಂಡುಮಾಡಿ ಓಡಿ ಬಂದು ಕಚ್ಚಿದೆ ಎನ್ನಲಾಗಿದೆ. ಕೂಡಲೇ ಕಾಸರ ಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತಿಂಗಳ ೩ರಂದು ತೃಕರಿಪುರ ಉಡುಂಬುಂದಲ ಜಿಎಲ್‌ಪಿ ಶಾಲೆಯ ಅಧ್ಯಾ ಪಕ ಮುಹಮ್ಮದ್ ಕಬೀರ್‌ಗೂ ಸೆನ್ಸಸ್ ಕರ್ತವ್ಯದ ಮಧ್ಯೆ ಸಾಕು ನಾಯಿ ಕಚ್ಚಿ ಗಾಯಗೊಳಿಸಿತ್ತು.





