ಬಸ್ ಢಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಆಟೋರಿಕ್ಷಾ

ಆಟೋರಿಕ್ಷಾ: ಇಬ್ಬರು ಮೃತ್ಯುಕಣ್ಣೂರು: ಬಸ್ ಢಿಕ್ಕಿ ಹೊಡೆದು ಮಗುಚಿ ಬಿದ್ದ ಆಟೋರಿಕ್ಷಾ ಬೆಂಕಿಗಾಹುತಿಯಾಗಿ ಇಬ್ಬರು ಮೃತಪಟ್ಟ ದಾರುಣ ಘಟನೆ ನಿನ್ನೆ ರಾತ್ರಿ ಕೂತುಪರಂಬ ಬಳಿ ಸಂಭವಿಸಿದೆ. ಕೂತುಪರಂಬ ಪೂವಕುನ್ನುವಿನ ಅಭಿಲಾಶ್ (೩೬), ಸಜೀಶ್ (೩೦) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ತಲಶ್ಶೇರಿ ಭಾಗದಿಂದ ಬಂದ ಬಸ್ ಸಿ.ಎನ್.ಜಿ ಬಳಸಿ ಸಂಚರಿಸುವ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ  ಮಗುಚಿ ಬಿದ್ದು ಆಟೋರಿಕ್ಷಾಕ್ಕೆ ಬೆಂಕಿ ಹತ್ತಿಕೊಂಡಿದೆ. ತಲಶ್ಶೇರಿಯಿಂದ ಆಗಮಿಸಿದ ಅಗ್ನಿಶಾಮಕದಳ, ನಾಗರಿಕರು ಹಾಗೂ ಪೊಲೀಸರು ಸೇರಿ ಬೆಂಕಿ ನಂದಿಸಿದ್ದಾರೆ. ಆಟೋರಿಕ್ಷಾ ಅಭಿಲಾಶ್‌ರದ್ದಾಗಿದೆ. ಕೊಯಂಬತ್ತೂರಿನಲ್ಲಿ ವ್ಯಾಪಾರಿಯಾಗಿರುವ ಸಜೀಶ್ ಕಾಲಿನ ಚಿಕಿತ್ಸೆಗಾಗಿ ಸಹೋದರಿಯ ಮನೆಗೆ ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

RELATED NEWS

You cannot copy contents of this page