ಬಾಯಾರು ಗಾಳಿಯಡ್ಕ ಮೊಹಮ್ಮದ್ ಆಶಿಫ್‌ರ ಮರಣ ತನಿಖೆ: ಕ್ರೈಂಬ್ರಾಂಚ್ ಅನಾಸ್ಥೆ- ಕಾಂಗ್ರೆಸ್ ಆರೋಪ
ಪೈವಳಿಕೆ : ಜನವರಿ 15ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಬಾಯಾರು ಗಾಳಿಯಡ್ಕದ ಮೊಹ ಮ್ಮದ್ ಆಶಿಫ್‌ರÀ ಮರಣದ ಬಗ್ಗೆ ಜಿಲ್ಲಾ ಕ್ರೈಬ್ರಾಂಚ್ ನಡೆಸುತ್ತಿರುವ ತನಿಖೆ ತೃಪ್ತಿಕರವಲ್ಲವೆಂದೂ ತನಿಖಾಧಿಕಾ ರಿಗಳು ತನಿಖೆಯಲ್ಲಿ ತೋರಿಸುತ್ತಿರುವ ಅನಾಸ್ಥೆ ಸಂಶಯಾಸ್ಪದವೆAದೂ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಕಳೆದ ಎರಡು ತಿಂಗಳಿAದ ತನಿಖೆ ನಡೆಸುತ್ತಿರುವ ಕ್ರೈಬ್ರಾಂಚ್ ಅಧಿಕಾರಿಗಳಿಗೆ ಈವರೆಗೆ ಮರಣದ ಕಾರಣ ದೃಢೀಕರಿಸಲು ಸಾಧ್ಯವಾಗದೆ ಇರುವುದು ನಾಚಿಕೆಗೇ ಡಿನ ವಿಚಾರವೆಂದು ಸಭೆ ಅಭಿಪ್ರಾಯ ಪಟ್ಟಿದೆ. ಈ ವಿಚಾರದಲ್ಲಿ ಅಗತ್ಯದ ಕಾನೂನು ಸಲಹೆ ಪಡೆದು ಕಾನೂನು ಕ್ರಮಕ್ಕೆ ಮುಂದಾಗಲು ತೀರ್ಮಾನಿ ಸಲಾಯಿತು. ಅಲ್ಲದೇ ಆಶಿಫ್‌ರ ಕುಟುಂಬಕ್ಕೆ ಸರಕಾರ ಕೂಡಲೇ ಆರ್ಥಿಕ ಸಹಾಯ ಒದಗಿಸುವಂತೆ ಒತ್ತಾಯಿಸಲಾಯಿತು. ಸಭೆಯಲ್ಲಿ ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಪದಾಧಿಕಾರಿಗಳಾದ ನಾರಾಯಣ ಏದಾರ್, ರಾಘವೇಂದ್ರ ಭಟ್, ಮಂಡಲ ಸಮಿತಿ ಪದಾಧಿಕಾರಿಗಳಾದ ಶಾಜಿ ಎನ್.ಸಿ., ಅಬ್ದುಲ್ಲ ಹಾಜಿ, ಪೀಟರ್ ಡಿಸೋಜ, ಮೊಯಿದಿನ್ ಕುಂಞÂ, ಅಬ್ದುಲ್ ರಸಾಕ್ ಮಾತನಾಡಿದರು. ಮಂಗಳೂರು ಯೂನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ. ಎ. ಪ್ರಥಮ ರ‍್ಯಾಂಕ್ ಪಡೆದ ಜೋಸ್ಲಿನ್ ಡಿ ಸೋಜರನ್ನು ಸಭೆ ಅಭಿನಂದಿಸಿತು. ಮುಸ್ತಾಫ ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.