ಬಾಯಾರು ಮುಹಮ್ಮದ್ ಅಸಿಫ್ ನಿಗೂಢ ಸಾವು: ಜಿಲ್ಲಾ ಕ್ರೈಮ್ ಬ್ರಾಂಚ್‌ನಿಂದ ತನಿಖೆ ಆರಂಭ
ಉಪ್ಪಳ: ಬಾಯಾರಿನ ಮೊಹಮ್ಮದ್ ಅಸಿಫ್‌ರ ನಿಗೂಢ ಸಾವಿನ ಬಗ್ಗೆ ಜಿಲ್ಲಾ ಕ್ರೈಮ್ ಬ್ರಾಂಚ್ ತನಿಖೆ ಆರಂಭಿಸಿದೆ. ಡಿವೈಎಸ್‌ಪಿ ಟಿ. ಉತ್ತಮ್‌ದಾಸ್‌ರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ. ಇದರಂಗವಾಗಿ ಡಿವೈಎಸ್‌ಪಿಯ ನೇತೃತ್ವದಲ್ಲಿರುವ ತನಿಖಾ ತಂಡ ಮುಹಮ್ಮದ್ ಆಸಿಫ್‌ರ ಮೃತದೇಹ ಕಂಡು ಬಂದ ಸ್ಥಳವನ್ನು ಸಂದರ್ಶಿಸಿದೆ. ಮನೆಯವರಿಂದ ಪ್ರಾಥಮಿಕ ಹೇಳಿಕೆಯನ್ನು ದಾಖಲಿಸಲಾಗಿದೆ. ಮೂರು ದಿನದ ಹಿಂದೆ ಮುಹಮ್ಮದ್ ಆಸಿಫ್ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಸಾವಿನಲ್ಲಿ ನಿಗೂಢತೆ ಕಂಡು ಬಂದ ಹಿನ್ನೆಲೆಯಲ್ಲಿ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡುಹೋಗಿ ಪೋಸ್ಟ್‌ಮಾ ರ್ಟಂ ನಡೆಸಲಾಗಿತ್ತು. ಸೊಂಟದ ಎಲುಬು ಮುರಿದಿರುವುದು ಮರಣಕ್ಕೆ ಕಾರಣವೆಂದು ಪೋಸ್ಟ್‌ಮಾರ್ಟಂ ವರದಿಯಲ್ಲಿ ಪ್ರಾಥಮಿಕ ಪತ್ತೆಯಾಗಿತ್ತು. ಆದರೆ ಇದು ಹೇಗೆ ಸಂಭವಿಸಿರುವುದು ಎಂಬ ಬಗ್ಗೆ ಸ್ಪಷ್ಟತೆ ಲಭಿಸಿರಲಿಲ್ಲ. ಬಿದ್ದರೆ ಅಥವಾ ಇನ್ನಾರಾದರೂ ದೂಡಿ ಹಾಕಿದರೆ ಸೊಂಟದ ಎಲುಬು ಮುರಿಯಬಹುದೆಂದು ಪೋಸ್ಟ್ ಮಾರ್ಟಂ ನಡೆಸಿದ ಸರ್ಜನ್ ಹೇಳಿಕೆ ನೀಡಿದ್ದರು. ವಾಹನ ಹತ್ತಿ ಇಳಿದರೂ ಈ ರೀತಿಯಲ್ಲಿ ಸಂಭವಿಸಬಹುದು ಎಂದು ಅವರು ತಿಳಿಸಿದ್ದಾರೆ. ಈ ವಿಷ ಯದಲ್ಲಿ ಸ್ಪಷ್ಟತೆ ಲಭಿಸಲು ಫಾರೆನ್ಸಿಕ್ ತಜ್ಞರು ಘಟನಾ ಸ್ಥಳವನ್ನು ಸಂದ ರ್ಶಿಸುವರು. ಈಗಾಗಲೇ ಸ್ಥಳೀಯ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.