ಬಾಯಾರು ವಿಲ್ಲೇಜ್ ಕಚೇರಿ ನೌಕರನ ಮೃತದೇಹ ರೈಲು ಹಳಿಯಲ್ಲಿ ಪತ್ತೆ
ಉಪ್ಪಳ: ಬಾಯಾರು ವಿಲ್ಲೇಜ್ ಕಚೇರಿಯಲ್ಲಿ ವಿಲ್ಲೇಜ್ ಅಸಿಸ್ಟೆಂಟ್‌ರಾಗಿದ್ದ ಉಪ್ಪಳ ಐಲ ಕುದುಪುಳು ನಿವಾಸಿ ರೈಲ್ವೇ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಿ| ನಾರಾಯಣ-ದಿ| ಯಶೋಧ ದಂಪತಿ ಪುತ್ರನಾದ ಹರಿಪ್ರಸಾದ್ ಯಾನೆ ಪಚ್ಚು (48) ಮೃತಪಟ್ಟವರು. ಇವರ ಮನೆ ಸಮೀಪದ ರೈಲು ಹಳಿಯಲ್ಲಿ ಇಂದು ಬೆಳಿಗ್ಗೆ ಮಂಗಳೂರು ಭಾಗಕ್ಕಿರುವ ಹಳಿಯ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪರಿಸರ ನಿವಾಸಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ತಲುಪಿ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯ ಲಾಗಿದೆ. ಇವರು ಈ ಮೊದಲ ನಯಾ ಬಜಾರ್‌ನಲ್ಲಿರುವ ಉಪ್ಪಳ ವಿಲ್ಲೇಜ್ ಕಚೇರಿಯಲ್ಲಿ ಸೇವೆಗೈದಿದ್ದರು. ಮೃತರು ಪತ್ನಿ ಭುವನ, ಪುತ್ರ ಸಂಬ್ರೀತ್, ಸಹೋದರರಾದ ಸತೀಶ, ಶಿವಪ್ರಸಾದ್, ಸಹೋದರಿ ಉಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.