ಬಾಲಕಿಗೆ ದೌರ್ಜನ್ಯ: ಅರ್ಚಕ ಸೆರೆ
ಪುನಲೂರು: ಮಾನಸಿಕ ಸವಾಲು ಎದುರಿಸುತ್ತಿರುವ ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಲೈಂಗಿಕ ದೌರ್ಜನ್ಯ ಗೈದ ಪ್ರಕರಣದಲ್ಲಿ ಕ್ಷೇತ್ರ ಅರ್ಚಕ ಸೆರೆಯಾಗಿದ್ದಾನೆ. ಪತ್ತನಾಪುರಂ ಕಾರ್ಯರ ಸರಕಾರ್‌ಮುಕ್‌ನಲ್ಲಿ ಬಾಡಿಗೆಗೆ ವಾಸಿಸುವ ಪಿರವಂದೂರ್ ಕುಮರಂಕುಡಿ ಕಿಶೋರ್ ಕೃಷ್ಣನ್ (24) ಸೆರೆಯಾದ ವ್ಯಕ್ತಿ. ಕಳೆದ ಸೆಪ್ಟಂಬರ್‌ನಲ್ಲಿ ಘಟನೆ ನಡೆದಿತ್ತು. ಈತ ಪುನಲೂರಿನಲ್ಲೂ, ಪತ್ತನಾಪುರದಲ್ಲೂ ವಿವಿಧ ಕ್ಷೇತ್ರಗಳಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯನ್ನು ಆಟೋ ರಿಕ್ಷಾದಲ್ಲಿ ಪಿರವಂದೂರ್ ಬಳಿಯ ಕಾಡಿಗೆ ಕರೆದೊಯ್ದು ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಪೊಲೀಸರು ಕೇಸು ದಾಖಲಿಸಿರುವುದಾಗಿ ತಿಳಿದುಕೊಂಡ ಈತ ಮುಂಬೈಗೆ ಪರಾರಿಯಾಗಿದ್ದನು. ಬಳಿಕ ಅಲ್ಲಿನ ಕ್ಷೇತ್ರವೊಂದರಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಈ ಮಾಹಿತಿ ತಿಳಿದು ಪುನಲೂರಿನಿಂದ ಪೊಲೀಸರು ಮುಂಬೈಗೆ ತಲುಪಿದರಾದರೂ ಆರೋಪಿ ಅಲ್ಲಿಂದಲೂ ಪರಾರಿಯಾಗಿ ದ್ದನು. ಈ ಮಧ್ಯೆ ಇತ್ತೀಚೆಗೆ ಊರಿಗೆ ಹಿಂತಿರುಗಿದ ಈತನನ್ನು ಪುನ್ನಾಲದಲ್ಲಿ ಬಂಧಿಸಲಾಗಿದೆ.