ಬಾಲಕಿಗೆ ದೌರ್ಜನ್ಯ: ಆರೋಪಿ ಮಾರಾಟಗೈದ ಚಿನ್ನ ಪತ್ತೆ
ಹೊಸದುರ್ಗ: ಹತ್ತರ ಹರೆಯದ ಬಾಲಕಿಗೆ ಲೈಂಗಿಕ ದೌರ್ಜನ್ಯಗೈದ ಪ್ರಕರಣದ ಆರೋಪಿ ಪಿ.ಎ. ಸಲೀಂ ಎಂಬಾತನನ್ನು ಕೂತುಪರಂಬದ ಜ್ಯುವೆಲ್ಲರಿಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಯಿತು. ಆರೋಪಿ ಬಾಲಕಿಯ ದೇಹದಿಂದ ದರೋಡೆಗೈದ ಚಿನ್ನವನ್ನು ಜ್ಯುವೆಲ್ಲರಿಯಿಂದ ಪತ್ತೆ ಹಚ್ಚಲಾಯಿತು.
ಜ್ಯುವೆಲ್ಲರಿ ಮಾಲಕ ಆರೋಪಿಯ ಗುರುತು ಪತ್ತೆ ಹಚ್ಚಿದ್ದಾರೆಂದು ಹೇಳಲಾ ಗುತ್ತಿದೆ. ಕೃತ್ಯದ ಬಳಿಕ ಕೂತುಪರಂಬದ ಸಹೋದರಿ ಮನೆಗೆ ತಲುಪಿದ ಆರೋಪಿ ಆಕೆಯ ಸಹಾಯದಿಂದ ಬೆಂ ಡೋಲೆಯನ್ನು ಜ್ಯುವೆಲ್ಲರಿ ಯಲ್ಲಿ ೬೦೦೦ ರೂಪಾಯಿಗೆ ಮಾರಾಟಗೈದಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ಆರೋ ಪಿಯನ್ನು ಕಳೆದ ಬುಧವಾರ ಕಾಸರಗೋಡು ಅಡೀಶನಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಐದು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ಬಿಟ್ಟು ಕೊಟ್ಟಿತ್ತು.