ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ೪೬ ವರ್ಷ ಕಠಿಣ ಸಜೆ, ೩.೫ ಲಕ್ಷ ರೂ. ಜುಲ್ಮಾನೆ
ಕಾಸರಗೋಡು: ೧೪ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಮೊಗ್ರಾಲ್ ಪುತ್ತೂರು, ಕಂಬಾರ್ ದೇಶಮಂಗಲ ನಿವಾಸಿ ಲೋಕೇಶ್ ಬಿ.ಎಸ್ (೪೭) ಎಂಬಾತನಿಗೆ ಪೋಕ್ಸೋ ಕಾನೂನು ಮತ್ತು ಐಪಿಸಿಯ ವಿವಿಧ ಸೆಕ್ಷನ್ ಗಳಲ್ಲಾಗಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾಧೀಶರಾದ ಎ. ಮನೋಜ್ ಅವರು ಒಟ್ಟು ೪೬ ವರ್ಷ ಕಠಿಣ ಸಜೆ ಹಾಗೂ ಎರಡೂವರೆ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಬದಿಯಡ್ಕ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ೨೦೧೮ ಫೆಬ್ರವರಿ ೨೫ರಂದು ಆರೋಪಿ ಲೋಕೇಶ್ ಚಾಲಕಿ ಮತ್ತು ಆಕೆಯ ತಂದೆಯನ್ನು ಬೈಕ್ನಲ್ಲಿ ಭೂತಕೋಲ ಉತ್ಸವಕ್ಕೆ ಕರೆದೊಯ್ದಿದ್ದನೆಂದೂ, ಬಳಿಕ ರಾತ್ರಿ ಆತ ಬಾಲಕಿಯ ತಂದೆಯನ್ನು ಮತ್ತೆ ಮನೆಗೆ ಹಿಂತಿರುಗಿಸಿದ್ದನು. ಅನಂತರ ಮುಂಜಾನೆ ಆತ ಬಾಲಕಿಯನ್ನು ಬೈಕ್ನಲ್ಲಿ ಆಕೆಯ ಮನೆಗೆ ತಲುಪಿಸುವ ದಾರಿ ಮಧ್ಯೆ ತೋಟವೊಂದರಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಈ ಪ್ರಕರಣದ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದರು. ಅಂದು ಬದಿಯಡ್ಕ ಪೊಲೀಸ್ ಠಾಣೆಯ ಎಸ್.ಐ. ಆಗಿದ್ದ ಮೆಲ್ವಿನ್ ಜೋಸ್ ಈ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ೩೮ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕು. ಶಿಕ್ಷೆಯನ್ನು ೧೫ ವರ್ಷವಾಗಿ ಒಟ್ಟಿಗೆ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಪ್ರೋಸಿಸ್ಯೂಷನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಪಿ.ಆರ್. ಪ್ರಕಾಶ್ ಅಮ್ಮಣ್ಣಾಯ ಅವರು ನ್ಯಾಯಾಲ ಯದಲ್ಲಿ ವಾದಿಸಿದ್ದರು.