ಬಾಳಿಗೆ ಅಸೀಸ್ ಕೊಲೆ ಪ್ರಕರಣ೧೬ ಆರೋಪಿಗಳ ಪೈಕಿ ೧೧ ಮಂದಿಯ ಖುಲಾಸೆ

ಕಾಸರಗೋಡು: ಪೈವಳಿಕೆ ಬಾಯಿಕಟ್ಟೆಯ ಬಾಳಿಗೆ ಅಸೀಸ್ ಕೊಲೆ ಪ್ರಕರಣದ ೧೬ ಮಂದಿ ಆರೋಪಿಗಳ ಪೈಕಿ ೧೧ ಮಂದಿಯ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ  ಅವರನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೨) ಖುಲಾಸೆಗೊಳಿಸಿ ತೀರ್ಪು ನೀಡಿದೆ. ಈ ಪ್ರಕರಣದ ಇತರ ಐವರು ಆರೋಪಿಗಳು ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಲಿಲ್ಲ. ಆದ್ದರಿಂದಾಗಿ ಅವರ ಮೇಲಿನ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಪ್ರತ್ಯೇಕಗೊಳಿಸಿ ಮುಂದೂಡಿದೆ.

೨೦೧೪ ಜನವರಿ ೨೫ರಂದು  ರಾತ್ರಿ ೯ ಗಂಟೆಗೆ ಪೈವಳಿಕೆ ಚೇವಾರು ರಸ್ತೆ ಜಂಕ್ಷನ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಾಳಿಗ ಅಸೀಸ್‌ರನ್ನು ಇನ್ನೊಂದು ಕಾರಿನಲ್ಲಿ ಅಲ್ಲಿಗೆ ಬಂದ ಅಕ್ರಮಿಗಳ ತಂಡ  ಕಾರಿನಿಂದ ಹೊರಕ್ಕೆ ಎಳೆದು ಹಾಕಿ ಮಾರಕಾಯುಧಗಳೊಂದಿಗೆ ಕಡಿದು ಮತ್ತು ಹೊಡೆದು ಕೊಲೆಗೈದಿತ್ತು. ಮಂಜೇಶ್ವರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

Leave a Reply

Your email address will not be published. Required fields are marked *

You cannot copy content of this page