ಬಿಎಂಎಸ್ ಎಣ್ಮಕಜೆ ಪಂಚಾಯತ್ ಸಮ್ಮೇಳನ
ಉಪ್ಪಳ: ಬಿಎಂಎಸ್ ನಿರ್ಮಾಣ ಯೂನಿಯನ್ ಎಣ್ಮಕಜೆ ಪಂಚಾ ಯತ್ ಸಮ್ಮೇಳನ ಪೆರ್ಲ ಕಚೇರಿಯಲ್ಲಿ ಜರಗಿತು. ಪಂಚಾಯತ್ ಸಮಿತಿ ಕೋಶಾಧಿಕಾರಿ ಚಂದ್ರಹಾಸ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ನಿರ್ಮಾಣ ಸಂಘದ ಉಪಾಧ್ಯಕ್ಷ ಐತ್ತಪ್ಪ ನಾರಾಯಣ ಮಂಗಲ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ರಾಜ್ಮೋಹನ್ ನೂತನ ಸಮಿತಿಯನ್ನು ಘೋಷಿಸಿ ಸಮಾರೋಪ ಭಾಷಣ ಮಾಡಿದರು. ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ ಸ್ವಾಗತಿಸಿ, ನೂತನ ಅಧ್ಯಕ್ಷ ದಿನೇಶ್ ನಡುಬೈಲು ವಂದಿಸಿದರು. ನೂತನ ಸಮಿತಿಗೆ ಅಧ್ಯಕ್ಷರಾಗಿ ದಿನೇಶ್ ನಡುಬೈಲು, ಉಪಾಧ್ಯಕ್ಷರಾಗಿ ವಿಜಯಕುಮಾರ್, ಕಾರ್ಯದರ್ಶಿ ಯಾಗಿ ಚಂದ್ರಶೇಖರ ಆಚಾರ್ಯ, ಜತೆ ಕಾರ್ಯದರ್ಶಿಯಾಗಿ ವಿಘ್ನೇಶ್ ಪೆಲ್ತಾಜೆ, ಜತೆ ಕಾರ್ಯದರ್ಶಿಯಾಗಿ ಮೋಹಿನಿ ಆಳ್ವ, ಕೋಶಾಧಿಕಾರಿಯಾಗಿ ಚಂದ್ರಹಾಸ ಪೆರ್ಲ ಆಯ್ಕೆಯಾದರು. ಸದಸ್ಯರಾಗಿ ರಾಧಾ ರೈ ಬಜಕೂಡ್ಲು, ರಾಮಚಂದ್ರ ಕುರೆಡ್ಕ, ಉಮೇಶ್ ಬಾಳೆಮೂಲೆ, ಜಯಕುಮಾರ್ ಕಾಟುಕುಕ್ಕೆ, ದಯಾನಂದ ಬೆದ್ರಂಪಳ್ಳ, ನಾರಾಯಣ ನಾಯ್ಕ ಬಜಕೂಡ್ಲು ಆಯ್ಕೆಯಾದರು.