ಬಿಎಸ್‌ಎನ್‌ಎಲ್ ಕಚೇರಿಯಿಂದ ಬ್ಯಾಟರಿ, ಕೇಬಲ್ ಕಳವು

ಕಾಸರಗೋಡು: ಬಿಎಸ್ ಎನ್‌ಎಲ್ ಕಚೇರಿಗೆ ನುಗ್ಗಿದ ಕಳ್ಳರು ಅಲ್ಲಿಂದ ತಾಮ್ರದ ಕೇಬಲ್ ಮತ್ತು ಬ್ಯಾಟರಿಗಳನ್ನು ಕಳವುಗೈದಿದ್ದಾರೆ. ಪೆರಿಯಾ ದಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಈ ಕಳವು ನಡೆದಿದೆ. ಈ ಕಚೇರಿಯೊಳಗೆ ಇರಿಸಲಾಗಿದ್ದ 1.08 ಲಕ್ಷ ರೂ. ಮೌಲ್ಯದ ಬ್ಯಾಟರಿಗಳನ್ನು ಹಾಗೂ 44,200 ರೂ. ಮೌಲ್ಯದ ತಾಮ್ರದ ಕೇಬಲ್ ಕಳವುಗೈಯ್ಯಲಾಗಿದೆ.

ಮಾರ್ಚ್ 16ರಿಂದ ಎಪ್ರಿಲ್ 24ರ ನಡುವಿನ ಯಾವುದೋ ದಿನದಂದು ಈ ಕಳವು ನಡೆದಿದೆ. ಈ ಬಗ್ಗೆ ಪವರ್ ಪ್ಲಾಂಟ್ ಕೊಠಡಿಯ ಹೊಣೆಗಾರಿಕೆ  ಹೊಂದಿರುವ ಅಧಿಕಾರಿಗೆ ನೀಲೇಶ್ವರ ಪಳ್ಳಿಕ್ಕೆ ರೆಯ ಕೆ. ಶೈಲೇಂದ್ರನವರು ದೂರು ನೀಡಿದ್ದು, ಅದರಂತೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page