ಬಿಎಸ್‌ಎನ್‌ಎಲ್ ವಾಹನ ಚಾಲಕನಿಗೆ ಹಲ್ಲೆ: ಕಾರಿಗೆ ಹಾನಿ; ಎಸ್‌ಟಿಯು ತಲೆಹೊರೆ ಕಾರ್ಮಿಕರ ವಿರುದ್ಧ ಕೇಸು
ಕಾಸರಗೋಡು: ಕಾಸರಗೋಡು ಟೆಲಿಫೋನ್ ಭವನದ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿ ವಾಹನಕ್ಕೆ ಹಾನಿಯುಂಟುಮಾಡಿ ರುವುದಾಗಿ ಆರೋಪಿಸಿ ಬಿಎಸ್‌ಎನ್ ಎಲ್ ಟೆಲಿಫೋನ್ ಭವನ್‌ನ ಸಬ್ ಇಂಜಿನಿಯರ್ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಎಸ್‌ಟಿಯುಗೆ ಸೇರಿದ ಇಬ್ಬರು ತಲೆಹೊರೆ ಕಾರ್ಮಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಎಸ್‌ಎನ್‌ಎಲ್ ವಾಹನ ಚಾಲಕ ವಿಶ್ವನಾಥ್ ಎಂಬವರ ಮೇಲೆ ಹಲ್ಲೆ ನಡೆಸಿ ಹಾಗೂ ಬಿಎಸ್‌ಎನ್‌ಎಲ್ ಕಚೇರಿಯ ಆವರಣದೊಳಗೆ ಅನಧಿಕೃತವಾಗಿ ನುಗ್ಗಿ ಅಲ್ಲಿ ನಿಲ್ಲಿಸ ಲಾಗಿದ್ದ ವಾಹನದ ಇಂಡಿಕೇಟರ್ ಒಡೆದು ಹಾನಿಗೊಳಿಸಿ 2000 ರೂ.ಗಳ ನಷ್ಟ ಉಂಟುಮಾಡ ಲಾಗಿದೆಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಸಾಮಗ್ರಿಗಳ ಲೋಡಿಂಗ್ ಅನ್‌ಲೋ ಡಿಂಗ್ ವಿಷಯದಲ್ಲಿ ಉಂಟಾದ ವಾಗ್ವಾದವೇ ಇದಕ್ಕೆ ಕಾರಣವಾಗಿದೆ ಯೆನ್ನಲಾಗಿದೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದೆ.