ಬಿಜೆಪಿಗೆ ಸೇರಲು ಇಚ್ಛಿಸುವುದಿಲ್ಲ-ಶಶಿ ತರೂರ್

ತಿರುವನಂತಪುರ: ತಾನು ಬಿಜೆಪಿಗೆ ಸೇರೆನೆಂದು ಕಾಂಗ್ರೆಸ್‌ನಿಂದ ಈಗ ದೂರ ಸರಿದು ನಿಂತಿರುವ  ಹಿರಿಯ ನೇತಾರ ತಿರುವನಂತಪುರ ಸಂಸದ ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಪಕ್ಷಗಳು ಅದರದ್ದೇ ಆದ ಇತಿಹಾಸ, ತತ್ವ ಸಿದ್ಧ್ದಾಂತಗಳು ಹಾಗೂ ನಂಬುಗೆಗಳನ್ನು ಹೊಂದಿವೆ.  ಆದ್ದರಿಂದ ನಾವು ನಂಬಿರುವ ಪಕ್ಷದ ತತ್ವ ಸಿದ್ದಾಂತದ ಮೇಲೆ ನಂಬುಗೆ ಇರುವ ವೇಳೆಯಲ್ಲೇ ಇನ್ನೊಂದು ಪಕ್ಷಕ್ಕೆ ಸೇರುವುದು ಸರಿಯಲ್ಲ. ಆದರೆ ಪಕ್ಷದಿಂದ ದೂರು ಸರಿದು ಪಕ್ಷೇತರ ನಿಲುವು ತಳೆಯುವ ಸ್ವಾತಂತ್ರ ಎಲ್ಲರಿಗೂ ಇದೆ ಎಂದು ಶಶಿ ತರೂರ್ ಹೇಳಿದ್ದಾರೆ.

ಆನ್‌ಲೈನ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಈ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಉತ್ತಮ ಭವಿಷ್ಯ ಹೊಂದಿದೆಯೇ ಎಂಬ ಪ್ರಶ್ನೆಗೆ ಆ ಬಗ್ಗೆ   ಹೇಳಲು ನಾನು ಜ್ಯೋತಿಷಿಯಲ್ಲವೆಂದು ಅವರು ಅದಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ನಾನು ದೇಶದ ಹಾಗೂ ಪಕ್ಷದ ಹಿತಾಸಕ್ತಿಯ ನಿಲುವಿನೊಂದಿಗೆ ಸಾಗುವ ವ್ಯಕ್ತಿಯಾಗಿದ್ದೇನೆ. ರಾಜಕೀಯಕ್ಕೆ ಸೇರಿದ ದಿನದಿಂದಲೇ ಅದನ್ನು ನಾನು ಪಾಲಿಸುತ್ತಾ ಬಂದಿದ್ದೇನೆ. ಕೇರಳದ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಇಲ್ಲಿನ ಜನರು ಆಗ್ರಹಪಡುತ್ತಿದ್ದಾರೆ. ಆದ್ದರಿಂದ ಪಕ್ಷ ನೀಡಿದ ಹೊಣೆಗಾರಿಕೆಯ ಹೊರತಾಗಿ ಜನರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬೇಕಾದ ಜವಾಬ್ದಾರಿಯೂ ನನ್ನ ಮೇಲಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ರನ್ನು ನಾನು ಇತ್ತೀಚೆಗೆ ಭೇಟಿಯಾಗಿದ್ದೆ.  ಆ ವೇಳೆ ಹಿಂದುತ್ವದ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿರುವ ಕೆಲವು ಕ್ರಮಗಳು ಸರಿಯಲ್ಲವೆಂದು ಅವರು ಹೇಳಿದ್ದರು. ಅದಕ್ಕೆ ನಾನು ಪೂರ್ಣವಾಗಿ ಸಹಮತ ವ್ಯಕ್ತಪಡಿಸಿದ್ದೆ. ಆದರೆ ಆ ವಿಷಯವನ್ನು ನೀವು ಈತನಕ ಯಾಕೆ ಬಹಿರಂ ಗಪಡಿಸಿಲ್ಲವೆಂದು ಮಾಧ್ಯಮದವರು ಪ್ರಶ್ನಿಸಿದಾಗ ಎಲ್ಲದಕ್ಕೂ ಪ್ರತಿಕ್ರಿಯೆ ನೀಡಲು ಸಾಧ್ಯವೇ ಎಂದು ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page