ಬಿಜೆಪಿ ಅಧ್ಯಕ್ಷರ ಆಯ್ಕೆ 24ರಂದು: ಕೆ. ಸುರೇಂದ್ರನ್ ಮುಂದುವರಿಯುವ ಸಾಧ್ಯತೆ
ತಿರುವನಂತಪುರ: ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನದಲ್ಲಿ ಕೆ. ಸುರೇಂದ್ರನ್ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಕೆ. ಸುರೇಂದ್ರನ್ ಮುಂದುವರಿಯುವ ಬಗ್ಗೆ ರಾಷ್ಟ್ರೀಯ ನಾಯಕತ್ವ ನಿರ್ಧಾರ ಕೈಗೊಂಡಿರು ವುದಾಗಿ ಹೇಳಲಾಗುತ್ತಿದೆ. ನೂತನ ಅಧ್ಯಕ್ಷರ ಕುರಿತು ನಿರ್ಧರಿಸುವ ಅಂಗ ವಾಗಿ 24ರಂದು ರಾಜ್ಯ ಕೌನ್ಸಿಲ್ ಸಭೆ ನಡೆಯಲಿದೆ. ಇದರಂಗವಾಗಿ ಇದರ ಜವಾಬ್ದಾರಿಯುಳ್ಳ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಾಳೆ ರಾಜ್ಯಕ್ಕೆ ಆಗಮಿಸುವರು.