ಬಿಜೆಪಿ ಉಮೇದ್ವಾರ ಯಾದಿ ಫೆ. ೨೬ರ ಮೊದಲು ಪ್ರಕಟ

ತಿರುವನಂತಪುರ: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಉಮೇದ್ವಾರರ ಯಾದಿಯನ್ನು ಫೆಬ್ರವರಿ ೨೬ರೊಳಗಾಗಿ ಪ್ರಕಟಿಸಲಾಗುವುದು.

ಫೆ. ೨೫ರಂದು ದೆಹಲಿಯಲ್ಲಿ ಬಿಜೆಪಿ ಉಮೇದ್ವಾರರ ಯಾದಿಗಳ ಪರಿಶೀಲನೆ ನಡೆಯಲಿದೆ. ಇದಕ್ಕಾಗಿ ಬಿಜೆಪಿ ಕೇಂದ್ರ ನೇತೃತ್ವದ ತುರ್ತು ಪಟ್ಟಿಯನ್ನು ಅಂದು ಕರೆಯಲಾಗಿದೆ. ಅದರಲ್ಲಿ ಪಾಲ್ಗೊಳ್ಳಲು ಬಿಜೆಪಿ ಕೇರಳ ರಾಜ್ಯ ಘಟಕ ಅಧ್ಯಕ್ಷ ಕೆ. ಸುರೇಂ ದ್ರನ್ ಈಗಾಗಲೇ ದಿಲ್ಲಿಗೆ ತೆರಳಿದ್ದಾರೆ. ಬಿಜೆಪಿ ಭಾರೀ ಸಾಧ್ಯತೆ ನಿರೀಕ್ಷಿ ಸುವ ತಿರುವನಂತಪುರದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್ ಮತ್ತು ಮಲಯಾಳ ಸಿನೆಮಾ ನಿರ್ಮಾ ಪಕ ಜಿ. ಸುರೇಶ್‌ರ ಹೆಸರುಗಳನ್ನು ಬಿಜೆಪಿ ಪರಿಶೀಲಿಸುತ್ತಿದೆ.

ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಪಿ.ಸಿ. ಜೋರ್ಜ್‌ರನ್ನು ಪರಿಗಣಿಸಿದರೂ ಅವರ ಬದಲು ಈಗ ಅವರ ಮಗ ನ್ಯಾಯವಾದಿ ಸೋನ್ ಜೋರ್ಜ್‌ರನ್ನು ಪಕ್ಷ ಪರಿಗಣಿಸುತ್ತಿದೆ.

ವಡಗರೆ ಕ್ಷೇತ್ರದಲ್ಲಿ ಎಡರಂಗದ ಉಮೇದ್ವಾರರಾಗಿ ಮಾಜಿ ಸಚಿವೆ ಕೆ.ಕೆ. ಶೈಲಜಾರನ್ನು ಸಿಪಿಎಂ ಕಣಕ್ಕಿಳಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರದಲ್ಲಿ ಶೋಭಾ ಸುರೇಂದ್ರನ್‌ರನ್ನು ಕಣಕ್ಕಿಳಿಸಲು ಬಿಜೆಪಿ ಪರಿಶೀಲಿಸುತ್ತಿದೆ.

ಉಳಿದಂತೆ ಪಿ.ಕೆ. ಕೃಷ್ಣದಾಸ್ (ಕಾಸರಗೋಡು), ಕೇಂದ್ರ ಸಚಿವ ವಿ. ಮುರಳೀಧರನ್ (ಅಟ್ಟಂಗಾಲ್), ನಟ ಸುರೇಶ್ ಗೋಪಿ (ತೃಶೂರು), ಸಿ.  ಕೃಷ್ಣಕುಮಾರ್ (ಪಾಲ್ಘಾಟ್), ಎ.ಪಿ. ಅಬ್ದುಲ್ಲ ಕುಟ್ಟಿ (ಮಲಪ್ಪುರಂ) ಎಂಬವರ ಉಮೇದ್ವಾರಿಕೆ ಹೆಚ್ಚು ಕಡಿಮೆ ಈಗಾಗಲೇ ಪಕ್ಕಾಗೊಂಡಿದೆ.

ಆಲತ್ತೂರಿನಲ್ಲಿ ರೇಣು ಸುರೇಶ್ ಮತ್ತು ಆಲ್ಪಪುಳದಲ್ಲಿ ಲಿಷ ರಂಜಿತ್‌ರ ಹೆಸರು ಪರಿಗಣಿಸಲಾಗುತ್ತಿದೆ. ಇಡುಕ್ಕಿ ಲೋಕಸಭಾ ಸೀಟನ್ನು ಬಿಡಿಜೆಎಸ್‌ಗೆ ಬಿಟ್ಟುಕೊಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page