ಬಿಜೆಪಿ ಕಯ್ಯಾರು ಬೂತ್ ಕಾರ್ಯಕರ್ತರ ಸಭೆ
ಉಪ್ಪಳ: ಎನ್ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಪಜ್ವರ ವಿಜಯಕ್ಕಾಗಿ ಬಿಜೆಪಿ ಕಯ್ಯಾರು 114ನೇ ಬೂತ್ ಸಮಿತಿ ಸಭೆ ಜೋಡುಕಲ್ಲುನಲ್ಲಿ ಜರಗಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ಬೂತ್ ಅಧ್ಯಕ್ಷ ಗಣೇಶ್ ಆಳ್ವ ಅಧ್ಯಕ್ಷತೆ ವಹಿಸಿದರು. ಪೈವಳಿಕೆ ಪಂಚಾ ಯತ್ ಸಮಿತಿ ಅಧ್ಯಕ್ಷ ಲೋಕೇಶ್ ನೋಂಡ, ಕಾರ್ಯದರ್ಶಿ ಪ್ರದೀಪ್ ಪಟ್ಲ, ಮುಖಂಡರಾದ ಕೆ.ಪಿ. ನಾರಾಯಣ ಪಟ್ಲ ಹಾಗೂ ಹಲವರು ಕಾರ್ಯಕರ್ತರು ಭಾಗವಹಿಸಿದರು.