ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬೆಂಕಿ ಅನಾಹುತ
ಕಾಸರಗೋಡು: ನಗರದ ತಾಳಿಪಡ್ಪಿನಲ್ಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಿನ್ನೆ ಅಕಸ್ಮಾತ್ ಬೆಂಕಿ ಅನಾಹುತ ಸಂಭವಿಸಿದೆ.
ಈ ಕಟ್ಟಡದ ಕೆಳಅಂತಸ್ತಿ ನಲ್ಲಿರುವ ಅಡುಗೆ ಕೊಠಡಿ ಭಾಗದಲ್ಲಿ ನಿನ್ನೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂ ಡಿದೆ. ಅದನ್ನು ಕಂಡ ಪ್ರಸ್ತುತ ಕಚೇರಿಯಲ್ಲಿz ವರು ತಕ್ಷಣ ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದೆ.ಬೆಂಕಿ ಎದ್ದ ಭಾಗದಲ್ಲಿ ಸಂಗ್ರಹಿಸಲಾಗಿದ್ದ ಬ್ಯಾನರ್ಗಳು, ಚುನಾವಣಾ ಪ್ರಚಾರ ಸಾಮಗ್ರಿಗಳು, ಕಾಗದಗಳು, ಪಿವಿಸಿ ಪೈಪ್ಗಳು, ಇಲೆಕ್ಟ್ರಿಕ್ ಸ್ವಿಚ್ ಬೋರ್ಡ್, ವಯರಿಂಗ್ ಇತ್ಯಾದಿಗಳು ಬೆಂಕಿಗಾಹುತಿಯಾಗಿವೆ. ಇದರಿಂದ ಸುಮಾರು ಮೂರು ಲಕ್ಷ ರೂ.ನಷ್ಟು ನಷ್ಟ ಅಂದಾಜಿಸಲಾಗಿದೆ ಎಂದು ಬಿಜೆಪಿ ನೇತಾರರು ಹೇಳಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿರಬಹುದೆಂದು ಶಂಕಿಸಲಾಗಿದೆ. ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.