ಬಿಜೆಪಿ ಪಾರಮ್ಯ : ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಗಿರುವ ದಿಕ್ಸೂಚಿ

ನವದೆಹಲಿ: ಪಂಚ ರಾಜ್ಯಗಳಿಗೆ ನಡೆದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯ ಪಾರಮ್ಯ ಮುಂದಿನ ಲೋಕಸಭೆ ಚುನಾವಣೆಗೆ ಒಂದು ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಚುನಾವಣೆ ನಡೆದ ಪಂಚ ರಾಜ್ಯಗಳಲ್ಲಿ ಹಿಂದಿ ಹೃದಯ ಕೇಂದ್ರಗಳಾದ ಮಧ್ಯ ಪ್ರದೇಶದಲ್ಲಿ ವಿಧಾನಸಭೆಯ ಒಟ್ಟು ೨೩೦ ಬಲದಲ್ಲಿ ಬಿಜೆಪಿ ೧೬೩ (ಕಳೆದ ಬಾರಿ ೧೦೯) ಸ್ಥಾನ ಗೆದ್ದು ಪ್ರಚಂಡ ಬಹುಮತ ಪಡೆದುಕೊಂಡಿದೆ. ಒಟ್ಟು ಚಲಾಯಿಸಲ್ಪಟ್ಟ ಮತದಲ್ಲಿ ಬಿಜೆಪಿಗೆ ಶೇ. ೪೮.೫೨ ಮತಗಳು ಲಭಿಸಿವೆ.  ಹಿಂದೆ ೧೧೪ ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಕೇವಲ ೬೬ ಸ್ಥಾನ ಪಡೆದು (ಶೇ ೪೦.೪೩). ಅದರಲ್ಲೇ ತೃಪ್ತಿಪಡೆಯಬೇಕಾಗಿಬಂದಿದೆ. ಭಾರತ್ ಆದಿವಾಸಿ ಪಾರ್ಟಿ ಸ್ಥಾನದಲ್ಲಿ ಗೆದ್ದಿದೆ.

ಕಾಂಗ್ರೆಸ್ ಆಡಳಿತದಲ್ಲಿದ್ದ ರಾಜಸ್ತಾನ ವಿಧಾನಸಭೆಯ ಒಟ್ಟು ೨೦೦ ಸ್ಥಾನಗಳ ಪೈಕಿ ೧೯೯ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಒಂದು ಕ್ಷೇತ್ರದ ಉಮೇದ್ವಾರ ನಿಧನಗೊಂಡಿದ್ದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಮತದಾನವನ್ನು  ಬಳಿಕ ಮುಂದೂಡಲಾಗಿತ್ತು. ಈ ಚುನಾವಣೆಯಲ್ಲಿ ೧೧೫ (ಕಳೆದ ಬಾರಿ  ಸ್ಥಾನಗೆದ್ದು ಬಿಜೆಪಿ ಗೆದ್ದು ಬೀಗಿ  ಕಾಂಗ್ರೆಸ್‌ನಿಂದ ಅಧಿಕಾರ ಕಸಿದುಕೊಂಡಿದೆ. ಬಿಜೆಪಿಗೆ ಶೇ. ೪೧.೬೯ ಮತಗಳು ಲಭಿಸಿದೆ. ಕಳೆದ ಬಾರಿ ೧೦೦ ಸ್ಥಾನಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಶೇ. ೩೯.೫೩ ಮತ ಗಳೊಂದಿಗೆ ಕೇವಲ ೬೯ ಸ್ಥಾನ ಪಡೆದ್ದು ಅಧಿಕಾರ ಕಳೆದುಕೊಳ್ಳಬೇಕಾಗಿ ಬಂದಿದೆ. ಉಳಿದಂತೆ ಭಾರತ್ ಆದಿವಾಸಿ ಪಾರ್ಟಿ-೩, ಬಿಎಸ್‌ಪಿ-೨, ಆರ್‌ಎಲ್‌ಡಿ-೧, ಆರ್‌ಎಲ್‌ಟಿಪಿ-೧ ಮತ್ತು ೮ ಕ್ಷೇತ್ರಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ.

ಕಾಂಗ್ರೆಸ್‌ನ ಕೈಯಲ್ಲಿದ್ದ ಛತ್ತೀಸ್‌ಗಢ್‌ನ ೯೦ ಸ್ಥಾನಗಳ ಪೈಕಿ ಶೇ. ೪೬.೩೦ ಮತ ಪಡೆದು ಬಿಜೆಪಿ ೫೪ ಸ್ಥಾನಗಳಲ್ಲಿ ಗೆದ್ದು, ಕಾಂಗ್ರೆಸ್‌ನಿಂದ  ಅಧಿಕಾರ ಕಿತ್ತುಕೊಂಡು ಸ್ಪಷ್ಟ ಬಹಗುಮತ ಪಡೆದುಕೊಂಡಿದೆ. ಕಳೆದ ಬಾರಿ ಬಿಜೆಪಿ ಕೇವಲ ೧೫ ಸೀಟುಗಳಲ್ಲಿ ಮಾತ್ರವೇ ಗೆದ್ದಿತ್ತು. ಇನ್ನು ಕಳೆದ ಬಾರಿ ೬೮ ಸ್ಥಾನ ಗೆದ್ದು ಅಧಿಕಾರಕ್ಕೇರಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಶೇ. ೪೨.೧೯ರಷ್ಟು ಮತಗಳೊಂದಿಗೆ ೩೫ ಸ್ಥಾನ ಪಡೆದು ತನ್ನ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂದಿದೆ.

ಇನ್ನು ತೆಲಂಗಾಣದ ಒಟ್ಟು ೧೧೯ ವಿಧಾನಸಭೆಯ ಬಲದಲ್ಲಿ ಕಳೆದ ಚುನಾವಣೆಯಲ್ಲಿ ೮೮  ಸ್ಥಾನ ಪಡೆದು ನಿರಂತರವಾಗಿ ಎಂಟನೇ ಬಾರಿ ಅಧಿಕಾರ ನಡೆಸಿದ್ದ ಟಿಆಪ್‌ಎಸ್ ಈ ಚುನಾವಣೆಯಲ್ಲಿ ಶೇ. ೩೭.೩೮ ಮತ ಪಡೆದು ಕೇವಲ ೩೯ ಸ್ಥಾನದಲ್ಲಿ ಮಾತ್ರವೇ ಗೆದ್ದುಕೊಳ್ಳುವಲ್ಲಿ ಸಫಲವಾಗಿ  ಅಧಿಕಾರ ಕಳೆದುಕೊಂಡಿದೆ. ಇಲ್ಲಿ ಕಳೆದ ಬಾರಿ ೧೯ ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿಯ  ಚುನಾವಣೆಯಲ್ಲಿ ಶೇ. ೩೯.೪೦ ಮತ ಪಡೆದು ೬೪ ಸ್ಥಾನಗಳಲ್ಲಿ ಗೆದ್ದು ಬೀಗಿ ಅಧಿಕಾರದ ಹೊಸ್ತಿಲಲ್ಲಿ ಬಂದು ನಿಂತಿದೆ. ಕೇವಲ ಒಂದು ಸೀಟು ಪಡೆದುಕೊಳ್ಳಲು ಮಾತ್ರವೇ ಸಾಧ್ಯವಾಗಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಶೇ. ೧೩.೮೬ ಮತಗಳೊಂದಿಗೆ ಎಂಟು ಸ್ಥಾನ ಪಡೆದುಕೊಂಡಿದೆ ಎಂಬ ವಿಶೇಷತೆಯೂ ಇದಕ್ಕಿದೆ. ಉಳಿದಂತೆ ಎಐಎಂ ಐ.ಎಂ ೭ ಹಾಗೂ ಸಿಪಿಐ ಒಂದು ಸೀಟು ಗೆದ್ದುಕೊಂಡಿದೆ.

ನಿನ್ನೆ ಮತಎಣಿಕೆ ಪೂರ್ಣಗೊಂಡ ನಾಲ್ಕು ರಾಜ್ಯಗಳ  ಮುಖ್ಯಮಂತ್ರಿಗಳ ಆಯ್ಕೆ ಇಂದು ಯಾ ನಾಳೆಯೊಳಗಾಗಿ ನಡೆಯಲಿದೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚವ್ಹಾಣ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ವಸುಂಧರೆ ರಾಜ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಇದೇ ರೀತಿ ಛತ್ತೀಸ್‌ಗಡ್ ಹೊಸಬರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸುವ ಸಾಧ್ಯತೆ ಇದೆ. ಇನ್ನು ತೆಲಂಗಾನದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿಗೆ ಮುಖ್ಯಮಂತ್ರಿ ಗದ್ದುಗೆ ಲಭಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page