ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾಗಿ ಆದರ್ಶ್ ಬಿ.ಎಂ. ಮರು ಆಯ್ಕೆ
ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಗೆ ನೂತನ ಅಧ್ಯಕ್ಷರಾಗಿ ಆದರ್ಶ್ ಬಿ.ಎಂ.ರನ್ನು ಮತ್ತೆ ಜಿಲ್ಲಾ ಸಮಿತಿ ನೇಮಕಗೊಳಿಸಿ ಘೋಷಣೆ ಹೊರಡಿಸಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್, ಯುವಮೋರ್ಚಾ ರಾಜ್ಯ ಅಧ್ಯಕ್ಷ ಪ್ರಪುಲ್ ಕೃಷ್ಣ ನಿರೀಕ್ಷಕರಾಗಿದ್ದರು. ಸತೀಶ್ಚಂದ್ರ ಭಂಡಾರಿ, ಶಿವಕೃಷ್ಣ ಭಟ್, ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.