ಬಿದ್ದು ಸಿಕ್ಕಿದ ಚಿನ್ನದ ಸರ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಗೆಳೆಯರು
ಮಂಜೇಶ್ವರ: ಬಿದ್ದು ಸಿಕ್ಕಿದ 12 ಗ್ರಾಂ ತೂಕದ ಚಿನ್ನದ ಸರವನ್ನು ಅದರ ವಾರೀಸುದಾರ ಕೋಳ್ಯೂರು ಕೊಡಂಗೆ ನಿವಾಸಿ ಸುಧೀರ್‌ರಿಗೆ ಹಸ್ತಾಂತರಿಸಿ ಮಜೀರ್ಪಳ್ಳದ ಆಟೋರಿಕ್ಷಾ ಚಾಲಕ ಅಬ್ಬಾಸ್ ಹಾಗೂ ಅವರ ಗೆಳೆಯ ಕಾಞಂಗಾಡ್ ನಿವಾಸಿ ಅಶ್ರಫ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಸುಂಕದಕಟ್ಟೆಯ ಕೋಳ್ಯೂರುಪದವಿನಲ್ಲಿ ಚಿನ್ನದ ಸರ ಕಳೆದುಹೋಗಿತ್ತು. ಇದು ಲಭಿಸಿದ ಅಶ್ರಫ್ ಗೆಳೆಯ ಆಟೋರಿಕ್ಷಾ ಚಾಲಕ ಅಬ್ಬಾಸ್‌ರನ್ನು ಸಂಪರ್ಕಿಸಿದ್ದು, ಅವರಿಬ್ಬರು ಸೇರಿ ವಾರೀಸುದಾರರನ್ನು ಪತ್ತೆಹಚ್ಚಿ ಅವರಿಗೆ ಹಸ್ತಾಂತರಿಸಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಮಜೀರ್ಪಳ್ಳ ಆಟೋ ಚಾಲಕರು ಅಭಿನಂದಿಸಿದ್ದಾರೆ.