ಬಿದ್ದು ಸಿಕ್ಕಿದ ಚಿನ್ನಾಭರಣ ಹಸ್ತಾಂತರಿಸಿ ಮಾದರಿಯಾದ ಆಟೋ ಚಾಲಕ

ಕಾಸರಗೋಡು: ಬಿದ್ದು ಸಿಕ್ಕಿದ ಒಂದು ಪವನ್ ತೂಕದ ಚಿನ್ನಾಭರಣವನ್ನು ಮಾಲಕನಿಗೆ ನೀಡಿ ಆಟೋ ಚಾಲಕ ಮತ್ತೆ ಮಾದರಿಯಾಗಿದ್ದಾರೆ. ಕಾಸರಗೋಡು ನಗರದ ಆಟೋ ಚಾಲಕ, ಎಸ್‌ಟಿಯು ಕಾರ್ಯಕರ್ತ ತಳಂಗರೆ  ನಿವಾಸಿ ಖಲೀಲ್ ಮಾದರಿಯಾದರು. ನಿನ್ನೆ ಕೆಲಸದ ಮಧ್ಯೆ ಖಲೀಲ್‌ಗೆ ಚಿನ್ನಾಭರಣ ಲಭಿಸಿತ್ತು. ಅದನ್ನು ಕಾಸರಗೋಡು ಟೌನ್ ಪೊಲೀಸ್ ಠಾಣೆಯಲ್ಲಿ ಮಾಲಕ ಚೆರ್ಕಳ ನಿವಾಸಿ ಸಕರಿಯರಿಗೆ ಹಸ್ತಾಂತರಿಸಿದರು.  ಈ ವೇಳೆ  ಎಸ್‌ಟಿಯು ಜಿಲ್ಲಾ ಉಪಾಧ್ಯಕ್ಷ ಮೊಯ್ದೀನ್ ಚೆಮ್ನಾಡು, ಖಲೀಲ್, ಸಿದ್ದಿಕ್, ಉಪಸ್ಥಿತರಿದ್ದರು. ಒಂದು ವರ್ಷದ ಹಿಂದೆ ಖಲೀಲ್‌ಗೆ ಆಟೋದಲ್ಲಿ ಒಂದು ಪವನ್ ಚಿನ್ನ ಬಿದ್ದು ಸಿಕ್ಕಿತ್ತು. ಅದನ್ನು ಕೂಡಾ ಪೊಲೀಸರ ಉಪಸ್ಥಿತಿಯಲ್ಲಿ ಮಾಲಕನಿಗೆ ನೀಡಿದ್ದರು.

RELATED NEWS

You cannot copy contents of this page