ಬಿರ್ಮಿನಡ್ಕದಲ್ಲಿ ಮಾಜಿ ಪಂಚಾಯತ್ ಸದಸ್ಯನ ಮಗನಿಗೆ ಇರಿತ

ಬದಿಯಡ್ಕ: ಗಡಿ ಪ್ರದೇಶದಲ್ಲಿರುವ ಮರದ ಹೆಸರಿನಲ್ಲಿ ಉಂಟಾದ ವಿವಾದ ದಿಂದ ವಾಗ್ವಾದ ನಡೆದಿದ್ದು, ಈ ವೇಳೆ ಮಾಜಿ ಪಂಚಾಯತ್ ಸದಸ್ಯನ ಮಗನಿಗೆ ಇರಿತವುಂಟಾಗಿದೆ. ಬಿರ್ಮಿನಡ್ಕದ ಮಾಜಿ ಪಂಚಾಯತ್ ಸದಸ್ಯ ಮುಹಮ್ಮದ್‌ರ ಪುತ್ರ ಲತೀಫ್‌ಗೆ ಇರಿತವುಂಟಾಗಿದೆ. ಇವರನ್ನು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ವೇಳೆ ಈ ಘಟನೆ ನಡೆದಿದೆ. ನೆರೆಮನೆ ನಿವಾಸಿ ಇರಿದಿರುವುದಾಗಿ ಹೇಳಲಾಗುತ್ತಿದೆ. ಗಡಿ ಪ್ರದೇಶದಲ್ಲಿ ಬೆಳೆದು ನಿಂತಿರುವ ಮರದ ರೆಂಬೆಗಳಿಗೆ ಸಂಬಂಧಿಸಿದ ವಿವಾದವೇ ಘಟನೆಗೆ ಕಾರಣವೆಂದು ಸಂಶಯಿಸಲಾಗುತ್ತಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page