ಬಿಲ್ಲವ ಸೇವಾ ಸಂಘದಿಂದ ಉದ್ಯೋಗ ಮಾಹಿತಿ ಶಿಬಿರ
ಪೆರ್ಲ: ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಮಿತಿ ಪೆರ್ಲ ಹಾಗೂ ಬಿಲ್ಲವ ಮಹಿಳಾ ಸಮಿತಿ ಪೆರ್ಲ ಇವುಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿ ಗಾಗಿ ಉಚಿತ ಉ ದ್ಯೋಗ ಮಾಹಿತಿ ಶಿಬಿರ ಅಕ್ಟೋಬರ್ 2ರಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ವಠಾರದಲ್ಲಿ ಜರುಗಲಿದೆ. ಕೇರಳ ಲೋಕ ಸೇವಾ ಆಯೋಗದ ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ್ ಪ್ರಸಾದ್ ಪಾಣೂರು ಶಿಬಿರದಲ್ಲಿ ಮಾಹಿತಿ ನೀಡುವರು. ಅಂದು ಬೆಳಿಗ್ಗೆ 9.15ಕ್ಕೆ ಉದ್ಯೋಗಾರ್ಥಿಗಳ ಹೆಸರು ನೋಂದಾವಣೆ ನಡೆಯಲಿದೆ. ಶಿಬಿರ ವನ್ನು ಕುಕ್ಕಾಜೆ ಶ್ರೀ ಮಹಾಕಾಳಿ ವೀ ರಾಂಜನೇಯ ದೇವಸ್ಥಾನದ ಧರ್ಮ ದರ್ಶಿ ಶ್ರೀಕೃಷ್ಣ ಗುರೂಜಿ ಉದ್ಘಾಟಿಸಲಿರುವರು. ಸಂಘದ ಅಧ್ಯಕ್ಷ ಬಿ. ಪಿ. ಶೇಣಿ ಅಧ್ಯಕ್ಷತೆ ವಹಿಸುವರು. ಪೆರ್ಲ ಹೊಂಬೆಳಕು ಟ್ಯೂಷನ್ ಸೆಂಟರ್ನ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶೇಣಿ, ಪೆರ್ಲ ಶ್ರೀ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ ಅತಿಥಿಗಳಾಗಿ ಭಾಗ ವಹಿಸುವರು. ಮಹಿಳಾ ಸಂಘದ ಅಧ್ಯಕ್ಷೆ ರುಕ್ಮಿಣಿ ಬೆದ್ರಂಪಳ್ಳ ಉಪಸ್ಥಿತರಿರುವರು. ಶಿಬಿರದಲ್ಲಿ ಜಿಲ್ಲೆಯ ಎಸ್ಸೆಸೆಲ್ಸಿ ಹಾಗೂ ಮೇಲ್ಪಟ್ಟ ವಿದ್ಯಾಭ್ಯಾಸ ಹೊಂದಿದ ಕನ್ನಡಿಗ ನಿರುದ್ಯೋಗಿಗಳು ಪಾಲ್ಗೊಳ್ಳಬಹುದಾಗಿದೆ.